Select Your Language

Notifications

webdunia
webdunia
webdunia
webdunia

ಐಪಿಎಲ್ ನಡುವೆ ಮಗಳು ಜೀವಾಗೆ ಬೇರೆ ಬೇರೆ ಭಾಷೆ ಕಲಿಸುತ್ತಿರುವ ಧೋನಿ!

ಐಪಿಎಲ್ ನಡುವೆ ಮಗಳು ಜೀವಾಗೆ ಬೇರೆ ಬೇರೆ ಭಾಷೆ ಕಲಿಸುತ್ತಿರುವ ಧೋನಿ!
ಚೆನ್ನೈ , ಮಂಗಳವಾರ, 26 ಮಾರ್ಚ್ 2019 (08:59 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಕ್ಯೂಟ್ ವಿಡಿಯೋ ಒಂದು ಇದೀಗ ಇನ್ ಸ್ಟಾಗ್ರಾಂನಲ್ಲಿ ಭಾರೀ ವೈರಲ್ ಆಗಿದೆ.


ಐಪಿಎಲ್ ನ ಬ್ಯುಸಿ ಶೆಡ್ಯೂಲ್ ನಡುವೆ ಜೀವಾ ಕೂಡಾ ಅಪ್ಪ ಧೋನಿಗೆ ಜತೆಯಾಗಿದ್ದಾಳೆ. ಪ್ರತೀ ವರ್ಷವೂ ಇದೇ ರೀತಿ ಜೀವಾ ಐಪಿಎಲ್ ನಡುವೆ ಅಪ್ಪನ ಜತೆ ಪ್ರವಾಸ ಹೋಗುವುದು ಸಾಮಾನ್ಯ. ಕಳೆದ ವರ್ಷವೂ ಧೋನಿ ಪುತ್ರಿ ಜತೆಗಿನ ಹಲವು ಕ್ಯೂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಈಗ ಮತ್ತೆ ಅಂತಹದ್ದೇ ವಿಡಿಯೋವನ್ನು ಧೋನಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಕಟಿಸಿದ್ದು, ಇದರಲ್ಲಿ ಜೀವಾಗೆ ಧೋನಿ ತಮಿಳು, ಅರೆಬಿಕ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಹೇಗಿದ್ದೀಯಾ ಎಂದು ಹೇಳಲು ಕಲಿಸುತ್ತಾರೆ. ವಿಶೇಷವೆಂದರೆ ಜೀವಾ ಕೂಡಾ ಅಪ್ಪ ಬೇರೆ ಬೇರೆ ಭಾಷೆಯಲ್ಲಿ ಕೇಳಿದ್ದಕ್ಕೆಲ್ಲಾ ಕರೆಕ್ಟ್ ಆಗಿ ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸುತ್ತಾಳೆ. ಧೋನಿಯ ಈ ವಿಡಿಯೋವನ್ನು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಇಷ್ಟಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮೊದಲ ಪಂದ್ಯದಲ್ಲೇ ಧೋನಿ ದಾಖಲೆ ಮುರಿದ ರಿಷಬ್ ಪಂತ್