Publish Date: Thu, 21 Feb 2019 (09:20 IST)
Updated Date: Thu, 21 Feb 2019 (09:21 IST)
ಮುಂಬೈ: ಯಾವುದೇ ಪಂದ್ಯವಿರಲಿ, ಧೋನಿ ವಿಕೆಟ್ ಹಿಂದುಗಡೆ ನಿಂತು ಸದಾ ಟೀಂ ಇಂಡಿಯಾ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಗೆ ಸಲಹೆ ನೀಡುತ್ತಲೇ ಇರುತ್ತಾರೆ.
ಧೋನಿ ಈ ರೀತಿ ಇಬ್ಬರು ಬೌಲರ್ ಗಳಿಗೆ ವಿಶೇಷವಾಗಿ ಸಲಹೆ ಸೂಚನೆ ನೀಡುವುದು, ಧೋನಿ ಸಲಹೆ ಪಾಲಿಸಿ ಅವರು ವಿಕೆಟ್ ಕೀಳುವುದನ್ನು ನೋಡಿ ಇತ್ತೀಚೆಗೆ ಅಭಿಮಾನಿಯೊಬ್ಬರು ಧೋನಿ ಪಕ್ಷಪಾತ ಮಾಡುತ್ತಾರೆ ಎಂದು ಆರೋಪವನ್ನೂ ಮಾಡಿದ್ದರು!
ಆದರೆ ಇದರ ಹಿಂದಿನ ಕಾರಣವನ್ನು ಇದೀಗ ಯಜುವೇಂದ್ರ ಚಾಹಲ್ ಮಾತಿನಲ್ಲಿ ಬಯಲಾಗಿದೆ. ‘ಧೋನಿ ಜತೆ ಆಡುವುದೇ ನಮಗೆ ದೊಡ್ಡ ಗೌರವ. ಏನೇ ಅನುಮಾನ ಬಂದರೂ ನಾನು ಮತ್ತು ಕುಲದೀಪ್ ಯಾವತ್ತೂ ಧೋನಿ ಬಳಿ ಸಲಹೆ ಕೇಳುತ್ತೇವೆ. ಹೀಗಾಗಿ ಅವರು ನಮಗೆ ಸಲಹೆ ಕೊಡುತ್ತಿರುತ್ತಾರೆ. ಧೋನಿ ಅಲ್ಲದೆ, ವಿರಾಟ್, ರೋಹಿತ್, ಶಿಖರ್ ಬಳಿ ನಾವು ಸಲಹೆ ಕೇಳುತ್ತಲೇ ಇರುತ್ತೇವೆ’ ಎಂದು ಚಾಹಲ್ ಬಹಿರಂಗಪಡಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಧೋನಿ ಸದಾ ವಿಕೆಟ್ ಹಿಂದುಗಡೆ ನಿಂತು ಸಲಹೆ ನೀಡುತ್ತಿರುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ