Publish Date: Thu, 14 Feb 2019 (10:20 IST)
Updated Date: Thu, 14 Feb 2019 (10:21 IST)
ರಾಂಚಿ: ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ನ ರಾಂಚಿಯ ಕ್ರಿಕೆಟ್ ಮೈದಾನದಲ್ಲಿ ಇನ್ನು ಧೋನಿ ಹೆಸರು ಅಜರಾಮರವಾಗಿ ಉಳಿಯಲಿದೆ.
ರಾಂಚಿ ಧೋನಿ ಹುಟ್ಟೂರು. ಇದೀಗ ಹುಟ್ಟೂರಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೌತ್ ಸ್ಟ್ಯಾಂಡ್ ಗೆ ಧೋನಿ ಹೆಸರಿಡಲಾಗಿದೆ. ‘ಎಂಎಸ್ ಧೋನಿ ಪೆವಿಲಿಯನ್’ ಎಂದು ಸೌತ್ ಸ್ಟ್ಯಾಂಡ್ ಗೆ ನಾಮಕರಣ ಮಾಡಲಾಗಿದೆ.
ಇದೀಗ ಕ್ರಿಕೆಟ್ ನಲ್ಲಿ ಖ್ಯಾತಿ ಗಳಿಸಿರುವ ತಮ್ಮ ತವರಿನ ಹುಡುಗನಿಗೆ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಗೌರವ ಸಲ್ಲಿಸಿದೆ. ಈಗಾಗಲೇ ಧೋನಿ ಹೆಸರನ್ನು ಬರೆಯಿಸಲಾಗಿದೆ. ಅದರ ಅಧಿಕೃತ ಉದ್ಘಾಟನೆ ಇನ್ನೂ ಆಗಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ