ಆಸ್ಟ್ರೇಲಿಯಾ ಸರಣಿಗೆ ಕೆಎಲ್ ರಾಹುಲ್ ವಾಪಸ್?

ಮಂಗಳವಾರ, 12 ಫೆಬ್ರವರಿ 2019 (10:06 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಫಾರ್ಮ್ ಕಳೆದುಕೊಂಡು ಎ ತಂಡದ ಪರ ಆಡುತ್ತಿರುವ ಕೆಎಲ್ ರಾಹುಲ್ ವಾಪಸಾಗುವ ನಿರೀಕ್ಷೆಯಿದೆ.


ಕೆಎಲ್ ರಾಹುಲ್ ಸದ್ಯಕ್ಕೆ ಭಾರತ ಎ ತಂಡದ ಪರ ಟೆಸ್ಟ್ ಪಂದ್ಯವಾಡುತ್ತಿದ್ದು, ಅರ್ಧಶತಕ ಗಳಿಸಿ ಫಾರ್ಮ್ ಗೆ ಮರಳುವ ಸೂಚನೆ ನೀಡಿದ್ದಾರೆ. ಈ ಹಿಂದೆ ಆಯ್ಕೆಗಾರ ಎಂಎಸ್ ಕೆ ಪ್ರಸಾದ್ ಕೂಡಾ ರಾಹುಲ್ ಗೆ ಬೆಂಬಲಿಸಿ ಮಾತನಾಡಿದ್ದರು. ಅಲ್ಲದೆ, ರಾಹುಲ್ ಜತೆಗೆ ರೆಹಾನೆ ಕೂಡಾ ವಿಶ್ವಕಪ್ ತಂಡದ ಯೋಜನೆಯಲ್ಲಿದ್ದಾರೆ ಎಂದಿದ್ದರು.

ಹೀಗಾಗಿ ಇದೀಗ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ರಾಹುಲ್, ರೆಹಾನೆಗೆ ಅವಕಾಶ ಮಾಡುವ ಸಾಧ್ಯತೆಯಿದೆ. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಹುಲ್ ದ್ರಾವಿಡ್ ಇರುವಾಗ ಭಾರತ ಎ ತಂಡಕ್ಕೆ ಇನ್ನೊಬ್ಬ ಕೋಚ್ ಯಾಕೆ?