Select Your Language

Notifications

webdunia
webdunia
webdunia
webdunia

ರಾಹುಲ್ ದ್ರಾವಿಡ್ ಇರುವಾಗ ಭಾರತ ಎ ತಂಡಕ್ಕೆ ಇನ್ನೊಬ್ಬ ಕೋಚ್ ಯಾಕೆ?

ರಾಹುಲ್ ದ್ರಾವಿಡ್
ಮುಂಬೈ: ಭಾರತ ಎ ತಂಡಕ್ಕೆ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್ ಕೋಚ್ ಆಗಿರುವಾಗ ಬೇರೆ ಕೋಚ್ ಗಳು ಯಾಕೆ? ಹೀಗಂತ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಭಾರತ ಎ ತಂಡಕ್ಕೆ ವಿಕ್ರಮ್ ರಾಥೋಡ್ ಎಂಬವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದ್ದು, ಇದೀಗ ಹಲವು ರೀತಿಯಲ್ಲಿ ವಿವಾದಕ್ಕೆ ಕಾರಣವಾಗಿದೆ. ವಿಕ್ರಮ್ ರಾಥೋಡ್ ಅಂಡರ್ 19 ತಂಡದ ಆಯ್ಕೆಗಾರ ಆಶೀಶ್ ಕಪೂರ್ ಸಂಬಂಧಿ ಎನ್ನುವುದು ಮೊದಲನೆಯದಾಗಿ ವಿವಾದಕ್ಕೆ ಕಾರಣವಾಗಿತ್ತು.

ಅದಾದ ಬಳಿಕ ಇದೀಗ ವಿಕ್ರಮ್ ರಾಥೋಡ್ ಆಯ್ಕೆ ಹಿಂದೆ ರಾಹುಲ್ ದ್ರಾವಿಡ್ ಒತ್ತಾಸೆಯಿದೆ ಎಂಬ ಸುದ್ದಿ ಹಬ್ಬಿರುವುದಕ್ಕೆ ಅಮಿತಾಭ್ ಚೌಧರಿ ಸಿಟ್ಟಿಗೆದ್ದಿದ್ದಾರೆ. ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಬರೆದಿರುವ ಈಮೇಲ್ ನಲ್ಲಿ ಸುಖಾ ಸುಮ್ಮನೇ ದ್ರಾವಿಡ್ ಹೆಸರು ಎಳೆದು , ತಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ತಮ್ಮ ಗಮನಕ್ಕೆ ಬಾರದೇ ವಿಕ್ರಮ್ ರಾಥೋಡ್ ಆಯ್ಕೆ ಮಾಡಿರುವುದನ್ನೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಜತೆ ಹೋಲಿಕೆ ಮಾಡುವವರಿಗೆ ಪಾಕ್ ಕ್ರಿಕೆಟಿಗ ಬಾಬರ್ ಅಜಮ್ ಹೇಳಿದ್ದೇನು ಗೊತ್ತಾ?