Publish Date: Sat, 09 Feb 2019 (08:58 IST)
Updated Date: Sat, 09 Feb 2019 (09:00 IST)
ಮುಂಬೈ: ಒಂದೆಡೆ ಕಳಪೆ ಫಾರ್ಮ್ ಇನ್ನೊಂದೆಡೆ ಕಾಫಿ ವಿತ್ ಕರಣ್ ಶೋ ವಿವಾದ.. ಇದೆಲ್ಲದವರಿಂದ ಹೈರಾಣಾಗಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಇದೀಗ ಟೀಂ ಇಂಡಿಯಾ ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಬೆಂಬಲ ಸಿಕ್ಕಿದೆ.
ರಾಹುಲ್ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಸಾದ್, ಇದು ಎಲ್ಲಾ ಕ್ರಿಕೆಟಿಗರ ಜೀವನದಲ್ಲೂ ಆಗುವಂತದ್ದೇ ಎಂದು ರಾಹುಲ್ ವಾಪಸಾತಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ.
‘ಘಟಾನುಘಟಿ ಆಟಗಾರರೂ ವೃತ್ತಿ ಜೀವನದಲ್ಲಿ ಇಂತಹ ರನ್ ಬರಗಾಲ ಎದುರಿಸುತ್ತಾರೆ. ಅದೇ ಕಾರಣಕ್ಕೆ ರಾಹುಲ್ ರನ್ನು ನಾವು ಇಂಗ್ಲೆಂಡ್ ಲಯನ್ಸ್ ವಿರುದ್ಧ ಎ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಸದ್ಯಕ್ಕೆ ರಾಹುಲ್ ಗೆ ನಾವು ಬೆಂಬಲ ನೀಡಬೇಕಿದೆ. ಅದನ್ನೇ ನಾವೀಗ ಮಾಡುತ್ತಿದ್ದೇವೆ. ಅವರು ಮರಳಿ ಲಯಕ್ಕೆ ಬರುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಪ್ರಸಾದ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ