Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಆಟಗಾರರ ಐಪಿಎಲ್ ಓಟಕ್ಕೆ ಬ್ರೇಕ್ ಹಾಕಲು ಕೋಚ್ ರವಿಶಾಸ್ತ್ರಿ ಪ್ಲ್ಯಾನ್?!

ಟೀಂ ಇಂಡಿಯಾ ಆಟಗಾರರ ಐಪಿಎಲ್ ಓಟಕ್ಕೆ ಬ್ರೇಕ್ ಹಾಕಲು ಕೋಚ್ ರವಿಶಾಸ್ತ್ರಿ ಪ್ಲ್ಯಾನ್?!
ಮುಂಬೈ , ಶುಕ್ರವಾರ, 8 ಫೆಬ್ರವರಿ 2019 (09:07 IST)
ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಹಿನ್ನಲೆಯಲ್ಲಿ ಈ ವರ್ಷದ ಐಪಿಎಲ್ ನಲ್ಲಿ ಪ್ರಮುಖ ಆಟಗಾರರನ್ನು ಆಡದೇ ಇರುವಂತೆ ಮನ ಒಲಿಸಲು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಐಪಿಎಲ್ ನಲ್ಲಿ ಗಾಯಗೊಂಡರೆ, ಸುಸ್ತಾದರೆ ಬಳಿಕ ಏಕದಿನ ವಿಶ್ವಕಪ್ ನಲ್ಲಿ ಆಡುವುದು ಕಷ್ಟವಾಗುತ್ತದೆ. ವಿಶ್ವಕಪ್ ಸಂದರ್ಭದಲ್ಲಿ ಪ್ರಮುಖ ಆಟಗಾರರು ಹೊರಗುಳಿದರೆ ತಂಡಕ್ಕೆ ದೊಡ್ಡ ನಷ್ಟವೇ ಸರಿ.

ಹೀಗಾಗಿ ವಿಶೇಷವಾಗಿ ವೇಗಿಗಳು ಐಪಿಎಲ್‍ ನಲ್ಲಿ ಪೂರ್ಣಪ್ರಮಾಣದಲ್ಲಿ ಆಡದೇ ಇದ್ದರೆ ಒಳ್ಳೆಯದು ಎಂದು ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಆಯಾ ಫ್ರಾಂಚೈಸಿಗಳು ಮತ್ತು ತಂಡದ ನಾಯಕರಲ್ಲೂ ಮಾತುಕತೆ ನಡೆಸಲು ಶಾಸ್ತ್ರಿ ಚಿಂತನೆ ನಡೆಸಿದ್ದಾರೆ. ವಿಶ್ವಕಪ್ ಗೂ ಮೊದಲು ವೇಗಿಗಳಿಗೆ ಸಾಕಷ್ಟು ವಿಶ್ರಾಂತಿ ನೀಡುವ ಉದ್ದೇಶದಿಂದ ಕೋಚ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಫೈನಲ್: ಕ್ಲಿಕ್ ಆಗದ ಚೇತೇಶ್ವರ ಪೂಜಾರ, ವಿದರ್ಭಕ್ಕೆ ಕಿರೀಟ