Publish Date: Fri, 08 Feb 2019 (11:36 IST)
Updated Date: Fri, 08 Feb 2019 (11:38 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಟೀಂ ಇಂಡಿಯಾ ಈ ಪಂದ್ಯಕ್ಕೂ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿದಿದೆ. ಕಳೆದ ಪಂದ್ಯ ಸೋತಿರುವ ಭಾರತ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದೆ.
ಕಳೆದ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯ ಕಂಡಿದ್ದ ಭಾರತ ಈ ಪಂದ್ಯದಲ್ಲಿ ಅದನ್ನು ಸರಿಪಡಿಸಿಕೊಂಡರೆ ಮಾತ್ರ ಸರಣಿ ಉಳಿಸಿಕೊಳ್ಳಲು ಸಾಧ‍್ಯ. ಒಂದು ವೇಳೆ ಇಂದು ಟೀಂ ಇಂಡಿಯಾ ಸೋತರೆ 10 ಸತತ ಟಿ20 ಸರಣಿ ಗೆಲುವಿನ ದಾಖಲೆಯ ಸರಪಳಿ ಕಳಚಿ ಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ