ನಮ್ಮ ಜತೆ ಆಡಿ ಎಂದು ಭಾರತವೇ ಬೇಡುವಂತೆ ಮಾಡುತ್ತೇವೆ ಎಂದ ಪಾಕ್ ಕ್ರಿಕೆಟ್ ಮಂಡಳಿ

ಮಂಗಳವಾರ, 12 ಫೆಬ್ರವರಿ 2019 (09:35 IST)
ಇಸ್ಲಾಮಾಬಾದ್: ಇದುವರೆಗೆ ಭಾರತೀಯ ಕ್ರಿಕೆಟ್ ಮಂಡಳಿ ಬಳಿ ಕ್ರಿಕೆಟ್ ಸರಣಿ ಆಡಲು ಮನವಿ ಮಾಡಿ ಸೋತ ಪಾಕಿಸ್ತಾನ ಇದೀಗ ತನ್ನ ವರಸೆ ಬದಲಿಸಿದೆ.


ಬಿಸಿಸಿಐನಿಂದ ನಷ್ಟಪರಿಹಾರ ಕಕ್ಕಿಸಲು ಐಸಿಸಿ ಮೊರೆ ಹೋಗಿ ವಿಫಲವಾದ ಮೇಲೆ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹತಾಶೆಯ ಹೇಳಿಕೆ ನೀಡಿದ್ದಾರೆ. ಇನ್ನು ಮುಂದೆ ನಾವಾಗಿಯೇ ಅವರ ಬಳಿ ಕ್ರಿಕೆಟ್ ಆಡೋಣ ಎಂದು ಕೇಳೋದು ಬೇಡ ಎಂದು ಪಿಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ವಾಸಿಂ ಖಾನ್ ಹೇಳಿದ್ದಾರೆ.

‘ನಮಗೂ ಆತ್ಮಗೌರವವಿದೆ. ಭಾರತದ ಬಳಿ ಅಂಗಲಾಚುತ್ತಾ ಕೂರುವುದನ್ನು ನಾವು ಬಿಡಬೇಕು. ದಿನ ಕಳೆಯುತ್ತಿದೆ, ವಿಶ್ವವೂ ಗುಂಡಗಿದೆ. ನಾವು ನಮ್ಮ ದೇಶದ ಕ್ರಿಕೆಟ್ ಅಭಿವೃದ್ಧಿ ಪಡಿಸುವುದರತ್ತ ಗಮನಹರಿಸಬೇಕು. ಮುಂದೊಂದು ದಿನ ಭಾರತವೇ ನಮ್ಮ ಬಳಿ ಸರಣಿ ಆಡಲು ಬೇಡಬಹುದು’ ಎಂದು ವಾಸಿಂ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿ ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ!