Select Your Language

Notifications

webdunia
webdunia
webdunia
webdunia

ಅಬ್ಬಾ... ಕೊನೆಗೂ ಕೆಎಲ್ ರಾಹುಲ್ ಕಮ್ ಬ್ಯಾಕ್!

ಅಬ್ಬಾ... ಕೊನೆಗೂ ಕೆಎಲ್ ರಾಹುಲ್ ಕಮ್ ಬ್ಯಾಕ್!
ಮೈಸೂರು , ಗುರುವಾರ, 14 ಫೆಬ್ರವರಿ 2019 (09:47 IST)
ಮೈಸೂರು: ಇಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಭಾರತ ಎ ತಂಡದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕೊನೆಗೂ ಫಾರ್ಮ್ ಗೆ ಮರಳಿದ್ದಾರೆ.


ಖಾಸಗಿ ಶೋನಲ್ಲಿ ಅಸಭ್ಯ ಕಾಮೆಂಟ್, ಕಳಪೆ ಫಾರ್ಮ್ ನಿಂದಾಗಿ ವೃತ್ತಿ ಜೀವನಕ್ಕೆ ಕಂಟಕ ತಂದುಕೊಂಡಿದ್ದ ಕೆಎಲ್ ರಾಹುಲ್ ಇದೀಗ ಫಾರ್ಮ್ ಗೆ ಮರಳಿದ್ದು, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಲು ಸಾಮರ್ಥ್ಯ ನಿರೂಪಿಸಿದ್ದಾರೆ.

ಲಯನ್ಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 89 ರನ್ ಗಳಿಸಿದ್ದ ರಾಹುಲ್ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, 86 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯಾ ಸರಣಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ, ಅಜಿಂಕ್ಯಾ ರೆಹಾನೆ ಮತ್ತು ರಾಹುಲ್ ಗೆ ಸ್ಥಾನ ನೀಡುವ ಬಗ್ಗೆ ಆಯ್ಕೆ ಸಮಿತಿ ಚಿಂತನೆ ನಡೆಸಿದೆ. ಇದೀಗ ತಕ್ಕ ಸಮಯದಲ್ಲೇ ಫಾರ್ಮ್ ಕಂಡುಕೊಂಡಿರುವುದರಿಂದ ರಾಹುಲ್ ಅದೃಷ್ಟ ಖುಲಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳೇ.. ಮತ್ತೆ ಕ್ರಿಕೆಟ್ ಗೆ ಬರ್ತಿದ್ದೀನಿ.. ಚಾಲೆಂಜ್ ಗೆ ರೆಡಿಯಾಗಿ! ಎಂದ ಪಾಕ್ ವೇಗಿ ಶೊಯೇಬ್ ಅಖ್ತರ್!