Publish Date: Tue, 12 Feb 2019 (17:52 IST)
Updated Date: Tue, 12 Feb 2019 (17:53 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೇರಿದಂತೆ ಇತ್ತೀಚೆಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಸಿಡಿಯುತ್ತಿರುವುದರ ಹಿಂದಿನ ಕಾರಣ ಬಯಲಾಗಿದೆ.
ಧೋನಿ ಇತ್ತೀಚೆಗೆ ಫಾರ್ಮ್ ಕಂಡುಕೊಂಡಿರುವುದಕ್ಕೆ ಅವರ ಬ್ಯಾಟ್ ನ ವಿನ್ಯಾಸ ಕಾರಣವಾಗಿದೆ ಎಂದು ಬ್ಯಾಟ್ ವಿನ್ಯಾಸಕರು ಬಹಿರಂಗಪಡಿಸಿದ್ದಾರೆ.
ಧೋನಿ ತಮ್ಮ ಬ್ಯಾಟಿಂಗ್ ಶೈಲಿಗೆ ಸೂಟ್ ಆಗುವ ರೀತಿಯಲ್ಲಿ ಬ್ಯಾಟ್ ನ ವಿನ್ಯಾಸ ಮಾಡಿಕೊಂಡಿದ್ದಾರೆ. ಬೌಲರ್ ಗಳು ಅವರ ಹುಳುಕನ್ನು ಗುರಿಯಾಗಿಟ್ಟುಕೊಂಡು ಬೌಲಿಂಗ್ ಮಾಡುವಾಗ ಅದನ್ನು ಎದುರಿಸಲು ಸುಲಭವಾಗುವಂತೆ ಅವರು ತಮ್ಮ ಬ್ಯಾಟ್ ವಿನ್ಯಾಸಗೊಳಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಯಶಸ್ಸು ಸಿಗುತ್ತಿದೆ ಎಂದು ಅವರ ವ್ಯವಸ್ಥಾಪಕ ತಂಡ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ