ಮುಂಬೈ: ಮುಂಬರುವ ಏಕದಿನ ವಿಶ್ವಕಪ್ ಬಳಿಕ ಧೋನಿ ನಿವೃತ್ತರಾಗಲಿದ್ದಾರೆಯೇ? ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಧೋನಿ ವಿಶ್ವಕಪ್ ಬಳಿಕ ನಿವೃತ್ತರಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಈ ಬಗ್ಗೆ ಎಂಎಸ್ ಕೆ ಪ್ರಸಾದ್ ಗೆ ಪತ್ರಕರ್ತರು ಪ್ರಶ್ನಿಸಿದಾಗ ಅವರು ಸ್ಪಷ್ಟನೆ ನೀಡಿದ್ದಾರೆ.
‘ನಾವು ಈ ಬಗ್ಗೆ ಈಗ ಏನನ್ನೂ ಚರ್ಚೆ ನಡೆಸಿಲ್ಲ. ವಿಶ್ವಕಪ್ ನಂತಹ ಮುಖ್ಯ ಟೂರ್ನಿಗೆ ಮೊದಲು ತಂಡದ ಗಮನ ಬೇರೆ ಕಡೆ ಸೆಳೆಯಲು ನಾವು ಇಷ್ಟಪಡುವುದಿಲ್ಲ’ ಎಂದು ಪ್ರಸಾದ್ ಸ್ಪಷ್ಟನೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ