Publish Date: Thu, 14 Feb 2019 (09:38 IST)
Updated Date: Thu, 14 Feb 2019 (09:39 IST)
ಇಸ್ಲಾಮಾಬಾದ್: ಒಂದು ಕಾಲದಲ್ಲಿ ವಿಶ್ವದ ಘಟಾನುಘಟಿ ಬ್ಯಾಟ್ಸ್ ಮನ್ ಗಳಿಗೆ ಸವಾಲಾಗಿದ್ದ ಶೊಯೇಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ತಂಡದ ಬೆಂಕಿಯುಂಡೆಯಾಗಿದ್ದರು. ಆದರೆ ನಿವೃತ್ತರಾದ ಮೇಲೆ ಸೈಲೆಂಟ್ ಆಗಿದ್ದ ಅಖ್ತರ್ ಇದೀಗ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದಾರಂತೆ.
ಹಾಗಂತ ಅವರೇ ತಮ್ಮ ಟ್ವಿಟರ್ ಪೇಜ್ ನಲ್ಲಿ ವಿಡಿಯೋ ಸಂದೇಶ ಹಾಕಿದ್ದಾರೆ. ಫೆಬ್ರವರಿ 14 ರ ದಿನವನ್ನು ಗುರುತು ಹಾಕಿಕೊಳ್ಳಿ. ಮತ್ತೆ ಕ್ರಿಕೆಟ್ ಗೆ ಮರಳುತ್ತಿದ್ದೇನೆ. ಮಕ್ಕಳೇ.. ವೇಗ ಎಂದರೇನು ಎಂದು ನಾನು ತೋರಿಸಿಕೊಡ್ತೀನಿ ಎಂದು ಶೊಯೇಬ್ ಚಾಲೆಂಜ್ ಮಾಡಿದ್ದಾರೆ.
ಆದರೆ ಯಾವ ತಂಡದ ಪರ, ಯಾವ ಟೂರ್ನಿಯಲ್ಲಿ ಆಡುತ್ತೇನೆಂದು ಹೇಳಿಲ್ಲ. ಇಂದಿನಿಂದ ಪಾಕಿಸ್ತಾನ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಯಲಿದ್ದು, ಬಹುಶಃ ಯಾವುದಾದರೂ ಒಂದು ತಂಡದ ಪರ ಅಖ್ತರ್ ಆಡಬಹುದು ಎಂದು ನಿರೀಕ್ಷಿಸಲಾಗಿದೆ. ಅದೇನೇ ಇದ್ದರೂ ಅಖ್ತರ್ ಪುನರಾಗಮನದ ಬಗ್ಗೆ ಖುಷಿಯಾಗಿರುವ ಹಳೆಯ ಸಹ ಕ್ರಿಕೆಟಿಗರು ಅವರನ್ನು ಸ್ವಾಗತಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ