Select Your Language

Notifications

webdunia
webdunia
webdunia
webdunia

ಧೋನಿ, ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ಲೀಗ್ ನಲ್ಲಿ ಯಾಕೆ ಆಡಲ್ಲ ಗೊತ್ತಾ?!

ಧೋನಿ, ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ಲೀಗ್ ನಲ್ಲಿ ಯಾಕೆ ಆಡಲ್ಲ ಗೊತ್ತಾ?!
ನವದೆಹಲಿ , ಶನಿವಾರ, 16 ಫೆಬ್ರವರಿ 2019 (09:24 IST)
ನವದೆಹಲಿ: ಭಾರತದಲ್ಲಿ ಐಪಿಎಲ್ ಕ್ರೀಡಾಕೂಟ ಇರುವಂತೆ ಪಾಕಿಸ್ತಾನ ಕೂಡಾ ಪಾಕ್ ಕ್ರಿಕೆಟ್ ಲೀಗ್ ಪ್ರತೀ ವರ್ಷ ಆಯೋಜಿಸುತ್ತದೆ. ಆದರೆ ಈ ವರ್ಣರಂಜಿತ ಕ್ರೀಡಾ ಕೂಟದಲ್ಲಿ ವಿಶ್ವದ ತಾರೆಯರ ಜತೆಗೆ ಭಾರತದ ಧೋನಿ, ಕೊಹ್ಲಿಯಂತಹ ಘಟಾನುಘಟಿ ಆಟಗಾರರು ಯಾಕೆ ಭಾಗವಹಿಸಲ್ಲ ಗೊತ್ತಾ?


ಮೊದಲನೆಯದಾಗಿ ಪಾಕಿಸ್ತಾನದಲ್ಲಿ ಆಡುವುದು ಭಾರತೀಯ ಆಟಗಾರರಿಗೆ ಸುರಕ್ಷತೆ ದೃಷ್ಟಿಯಿಂದ ಅಪಾಯವೇ. ಅಲ್ಲದೆ, ಎರಡು ದೇಶಗಳ ನಡುವಿನ ಸಂಬಂಧವೂ ಸರಿ ಇಲ್ಲ. ಹೀಗಿರುವಾಗ ಅಲ್ಲಿನ ಕ್ರಿಕೆಟ್ ಲೀಗ್ ನಲ್ಲಿ ಭಾರತದ ಈ ಖ್ಯಾತ ಕ್ರಿಕೆಟಿಗರು ಪಾಲ್ಗೊಂಡರೆ ವಿವಾದಕ್ಕೀಡಾಗುವುದು ಖಂಡಿತಾ.

ಇನ್ನೊಂದು ಪ್ರಧಾನ ವಿಷಯವೆಂದರೆ, ಭಾರತದ ಖ್ಯಾತ ಕ್ರಿಕೆಟಿಗರಿಗೆ ಐಪಿಎಲ್ ಹೊರತುಪಡಿಸಿ ಉಳಿದ ಕ್ರಿಕೆಟ್ ಲೀಗ್ ಗಳಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮತಿ ನೀಡಿಲ್ಲ, ನೀಡುವುದೂ ಇಲ್ಲ. ಹೀಗಾಗಿ ಈ ಕ್ರಿಕೆಟಿಗರು ಪಾಕ್ ಲೀಗ್ ನಲ್ಲಿ ಭಾಗವಹಿಸುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇದ್ದಕ್ಕಿದ್ದಂತೆ ಬಂದ ಮದುವೆ ಸುದ್ದಿಗೆ ಹಾರ್ದಿಕ್ ಪಾಂಡ್ಯ ಗೆಳತಿ ಹೇಳಿದ್ದೇನು ಗೊತ್ತಾ?