Select Your Language

Notifications

webdunia
webdunia
webdunia
webdunia

ಹುತಾತ್ಮ ಯೋಧರನ್ನು ಸ್ಮರಿಸದೇ ಪ್ರಮೋಷನಲ್ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿಗೆ ಮಂಗಳಾರತಿ!

ಹುತಾತ್ಮ ಯೋಧರನ್ನು ಸ್ಮರಿಸದೇ ಪ್ರಮೋಷನಲ್ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿಗೆ ಮಂಗಳಾರತಿ!
ನವದೆಹಲಿ , ಶುಕ್ರವಾರ, 15 ಫೆಬ್ರವರಿ 2019 (10:10 IST)
ನವದೆಹಲಿ: ಪುಲ್ವಾಮಾದಲ್ಲಿ ನಿನ್ನೆ ಉಗ್ರರು ಭಾರತೀಯ ಯೋಧರ ಮೇಲೆ ನಡೆಸಿದ ಪೈಶಾಚಿಕ ಕೃತ್ಯಕ್ಕೆ ದೇಶವೇ ಬೆಚ್ಚಿಬೀಳುವಂತೆ ಮಾಡಿದರೆ, ಅತ್ತ ವಿರಾಟ್ ಕೊಹ್ಲಿ ಇದನ್ನು ಮರೆತು ಸ್ಪೋರ್ಟ್ಸ್ ಕ್ಲಬ್ ಒಂದರ ಪ್ರಮೋಷನಲ್ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.


ಉಗ್ರರ ದಾಳಿ ನಡೆದ ತಕ್ಷಣ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ ಹಲವರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಆದರೆ ಕೊಹ್ಲಿ ಮಾತ್ರ ಘಟನೆ ಬಗ್ಗೆ ಒಂದೇ ಒಂದು ಟ್ವೀಟ್ ಮಾಡದೇ ಸ್ಪೋರ್ಟ್ಸ್ ಕ್ಲಬ್ ಒಂದರ ಬಗ್ಗೆ ಟ್ವೀಟ್ ಮಾಡಿದ್ದು, ಟ್ವಿಟರಿಗರ  ಆಕ್ರೋಶಕ್ಕೆ ಗುರಿಯಾಗಿದೆ.

ಕೊಹ್ಲಿ ಟ್ವೀಟ್ ನೋಡಿ ಟ್ವಿಟರಿಗರು ಹಿಗ್ಗಾ ಮುಗ್ಗಾ ಟೀಂ ಇಂಡಿಯಾ ನಾಯಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಕೊಹ್ಲಿ ಟ್ವೀಟ್ ಡಿಲೀಟ್ ಮಾಡಿದರು. ಆದರೆ ಅಷ್ಟರಲ್ಲಾಗಲೇ ಅವರ ಟ್ವೀಟ್ ನೋಡಿ ಅಭಿಮಾನಿಗಳು ಆಕ್ರೋಶಕ್ಕೊಳಗಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ: ಕಮ್ ಬ್ಯಾಕ್ ಮಾಡಲಿರುವ ಆಟಗಾರರು ಯಾರೆಲ್ಲಾ?