Publish Date: Mon, 18 Feb 2019 (09:00 IST)
Updated Date: Mon, 18 Feb 2019 (09:02 IST)
ಮುಂಬೈ: ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲಿ ಒಬ್ಬರೆನಿಸಿಕೊಂಡ ಎಂಎಸ್ ಧೋನಿ ಚಾಣಕ್ಷ್ಯತನದ ಬಗ್ಗೆ ಎರಡು ಮಾತಿಲ್ಲ. ಅವರಿಂದ ಸಾಕಷ್ಟು ಪಾಠ ಕಲಿತುಕೊಂಡಿರುವ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಇದೀಗ ಧೋನಿ ಗುಣಗಾನ ಮಾಡಿದ್ದಾರೆ.
ವಿಕೆಟ್ ಹಿಂದುಗಡೆ ನಿಂತು ಕುಲದೀಪ್ ಯಾದವ್ ಗೆ ಸದಾ ಸಲಹೆ ಸೂಚನೆ ನೀಡುವ ಧೋನಿ ಹಲವು ಬಾರಿ ವಿಕೆಟ್ ಕೀಳಲು ನೆರವಾಗಿದ್ದಾರೆ. ಧೋನಿಯನ್ನು ಹಿರಿಯಣ್ಣನಂತೆ ನೋಡುವ ಕುಲದೀಪ್ ಇಂಥಾ ವಿಕೆಟ್ ಕೀಪರ್ ನನ್ನು ನೋಡಿಯೇ ಇರಲಿಲ್ಲ ಎಂದು ಹೊಗಳಿದ್ದಾರೆ.
‘ಧೋನಿಯಷ್ಟು ಮಿಂಚಿನ ರೀತಿಯಲ್ಲಿ ಸ್ಟಂಪ್ ಔಟ್ ಮಾಡುವ, ರನೌಟ್ ಮಾಡುವ ಇಂತಹ ವಿಕೆಟ್ ಕೀಪರ್ ನನ್ನು ನಾನು ಇದುವರೆಗೆ ನೋಡಿರಲಿಲ್ಲ. ಅವರು ಗೇಮ್ ಚೇಂಜರ್. ಅವರು ತಂಡದಲ್ಲಿರುವುದು ನಮ್ಮ ಅದೃಷ್ಟ’ ಎಂದು ಕುಲದೀಪ್ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ