Publish Date: Sun, 17 Feb 2019 (09:09 IST)
Updated Date: Sun, 17 Feb 2019 (09:10 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಕೊನೆಗಳಿಗೆಯಲ್ಲಿ ಇಬ್ಬರೂ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಆಡಲ್ಲ ಎಂದವರು ಕೊನೆ ಗಳಿಗೆಯಲ್ಲಿ ತಂಡಕ್ಕೆ ಸೇರಿಕೊಂಡಿದ್ದರ ಹಿಂದಿನ ಕಾರಣ ವಿಶ್ವಕಪ್ ಕ್ರೀಡಾ ಕೂಟ. ವಿಶ್ವಕಪ್ ಗೆ ಮೊದಲು ನಡೆಯುವ ಕೊನೆಯ ಸರಣಿ ಇದಾಗಿರುವುದರಿಂದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಈ ಸರಣಿ ಆಟಗಾರರಿಗೆ ನಿರ್ಣಾಯಕ.
ಇದೇ ಕಾರಣಕ್ಕೆ ರೋಹಿತ್ ಶರ್ಮಾ, ಧವನ್ ಕೊನೆಯ ಹಂತದಲ್ಲಿ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಅಂತಿಮ ಪಂದ್ಯಗಳಿಗೆ ಈ ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ