Publish Date: Tue, 12 Dec 2017 (08:22 IST)
Updated Date: Tue, 12 Dec 2017 (08:25 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟೆಲಿಯಲ್ಲಿ ಆಪ್ತೇಷ್ಟರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಕೆಲವರಿಗೆ ಮಾತ್ರವೇ ಆಹ್ವಾನವಿತ್ತು.
ಅನುಷ್ಕಾ ಮತ್ತು ವಿರಾಟ್ ಮದುವೆ ವಿಷಯ ಅತ್ಯಂತ ಗೌಪ್ಯವಾಗಿತ್ತು. ಎಷ್ಟೆಂದರೆ ಅನುಷ್ಕಾ ಮೆಚ್ಚಿನ ಹೀರೋ ಶಾರುಖ್ ಖಾನ್ ಗೂ ಆಹ್ವಾನವಿರಲಿಲ್ಲ. ಈ ಮದುವೆಗೆ ಕೇವಲ ಇಬ್ಬರ ಕುಟುಂಬದವರು ಮಾತ್ರ ಹಾಜರಿದ್ದರು.
ವಿವಾಹದ ಬಗ್ಗೆ ಅನುಷ್ಕಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಫೋಟೋ ಸಮೇತ ಸಂದೇಶ ಹಾಕಿದ ಬಳಿಕ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಸೇರಿದಂತೆ ಗಣ್ಯರು ಶುಭ ಹಾರೈಸಿ ಸಂದೇಶ ಬರೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ