Publish Date: Sun, 10 Dec 2017 (10:58 IST)
Updated Date: Sun, 10 Dec 2017 (11:00 IST)
ನವದೆಹಲಿ: ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಆಫ್ರಿಕಾ ಪ್ರವಾಸ ಮಾಡುವಾಗ ಕೊಹ್ಲಿ ಗೆಳತಿ ಅನುಷ್ಕಾ ಕೂಡಾ ಜತೆಯಾಗಲಿದ್ದಾರಂತೆ.
ಮೂಲಗಳ ಪ್ರಕಾರ ಅನುಷ್ಕಾ ಕೂಡಾ ಆಫ್ರಿಕಾ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿರಾಟ್ ಜತೆ ಅನುಷ್ಕಾ ಗೆಳತಿಯಾಗಿ ಹೋಗುತ್ತಾರಾ, ಪತ್ನಿಯಾಗಿ ತೆರಳುತ್ತಾರಾ ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವಿರಾಟ್ ಜತೆ ಅನುಷ್ಕಾ ಕೂಡಾ ಆಫ್ರಿಕಾ ಪ್ರವಾಸ ಮಾಡಲಿರುವುದು ಖಂಡಿತಾ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೇ ವಾರ ಡಿಸೆಂಬರ್ 12 ರಂದು ಕೊಹ್ಲಿ-ಅನುಷ್ಕಾ ಇಟೆಲಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಒಂದು ವೇಳೆ ಕೊಹ್ಲಿ ಅನುಷ್ಕಾ ವಿವಾಹವಾದರೆ ಈ ಆಫ್ರಿಕಾ ಸರಣಿ ಈ ಯುವ ಜೋಡಿಯ ಪಾಲಿಗೆ ಹನಿಮೂನ್ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ