Publish Date: Fri, 08 Dec 2017 (08:37 IST)
Updated Date: Fri, 08 Dec 2017 (08:39 IST)
ಮುಂಬೈ: ಶ್ರೀಲಂಕಾ ಸರಣಿ ಮುಗಿದ ಕೂಡಲೇ ದ. ಆಫ್ರಿಕಾ ಪ್ರವಾಸ ಬೆಳೆಸಲಿರುವ ಟೀಂ ಇಂಡಿಯಾ ಅಲ್ಲಿ ಮೂರೂ ಮಾದರಿಯ ಕ್ರಿಕೆಟ್ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತದ ನಿಜವಾದ ಸತ್ವ ಪರೀಕ್ಷೆಯಾಗಲಿದೆ.
ಸದ್ಯಕ್ಕೆ ಟೀಂ ಇಂಡಿಯಾ ಎ ತಂಡದ ಕೋಚ್ ಆಗಿರುವ ‘ವಾಲ್’ ರಾಹುಲ್ ದ್ರಾವಿಡ್ ಈ ಬಾರಿ ಭಾರತಕ್ಕೆ ದ. ಆಫ್ರಿಕಾದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಹೆಚ್ಚಿನ ಅವಕಾಶವಿದೆ ಎಂದಿದ್ದಾರೆ.
ಈಗಿನ ತಂಡವನ್ನು ಗಮನಿಸಿದರೆ ಸರಣಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ನಮ್ಮಲ್ಲಿ ಉತ್ತಮ ವೇಗಿಗಳು, ಸ್ಪಿನ್ನರ್ ಗಳು ಹಾರ್ದಿಕ್ ಪಾಂಡ್ಯನಂತರ ಆಲ್ ರೌಂಡರ್ ಗಳೂ ಇದ್ದು ಸಮತೋಲನದ ತಂಡವಿದೆ. ದ. ಆಫ್ರಿಕಾವನ್ನು ಅದರದ್ದೇ ನೆಲದಲ್ಲಿ ಮಣಿಸಲು ಇದೇ ಸುವರ್ಣಾವಕಾಶ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ