Publish Date: Fri, 08 Dec 2017 (15:40 IST)
Updated Date: Fri, 08 Dec 2017 (15:43 IST)
ನವದೆಹಲಿ: ಅತ್ತ ಮದುವೆ ಬಗ್ಗೆ ರೂಮರ್ ಹಬ್ಬುತ್ತಿದ್ದರೆ ಅದಕ್ಕೆ ನೀರೆರೆಯುವಂತೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸ್ವಿಜರ್ ಲ್ಯಾಂಡ್ ವಿಮಾನವೇರಿದ್ದಾರೆ.
ಅನುಷ್ಕಾ ತನ್ನ ಪೋಷಕರ ಜತೆ ಮುಂಬೈ ವಿಮಾನ ನಿಲ್ದಾಣದಿಂದ ಸ್ವಿಜರ್ ಲ್ಯಾಂಡ್ ಫ್ಲೈಟ್ ಹತ್ತಿದ್ದರೆ, ಕೊಹ್ಲಿ ನವದೆಹಲಿ ಮೂಲಕ ತಡರಾತ್ರಿ ಸ್ವಿಜರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಈ ಪ್ರಯಾಣ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಕೊಹ್ಲಿ ಮತ್ತು ಅನುಷ್ಕಾ ಇಟೆಲಿಯಲ್ಲಿ ಮುಂದಿನ ವಾರ ವಿವಾಹವಾಗಲಿದ್ದಾರೆ ಎಂಬ ಸುದ್ದಿಗೆ ಈ ಪ್ರಯಾಣ ಮತ್ತಷ್ಟು ಬಲ ನೀಡಿದೆ. ತಡರಾತ್ರಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕೊಹ್ಲಿ ಮುಖ ಗುರುತು ಸಿಗದಂತೆ ಡ್ರೆಸ್ ಮಾಡಿಕೊಂಡು ವಿಮಾನವೇರಿದ್ದಾರೆ. ಅಷ್ಟೇ ಅಲ್ಲ, ತಮ್ಮ ಜತೆ ಸೆಲ್ಫೀ ತೆಗೆಯಲು ಬಯಸಿದ ಭದ್ರತಾ ಅಧಿಕಾರಿಗಳಿಗೂ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ