Select Your Language

Notifications

webdunia
webdunia
webdunia
webdunia

ಅನುಷ್ಕಾ-ಕೊಹ್ಲಿ ವಿವಾಹವಾಗುತ್ತಿರುವುದು ನಿಜ! ಆದರೆ ಇಟೆಲಿಯಲ್ಲಿ ಅಲ್ಲ!

ಅನುಷ್ಕಾ-ಕೊಹ್ಲಿ ವಿವಾಹವಾಗುತ್ತಿರುವುದು ನಿಜ! ಆದರೆ ಇಟೆಲಿಯಲ್ಲಿ ಅಲ್ಲ!
ಮುಂಬೈ , ಗುರುವಾರ, 7 ಡಿಸೆಂಬರ್ 2017 (17:53 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯದಲ್ಲೇ ವಿವಾಹವಾಗಲಿರುವುದು ನಿಜ. ಆದರೆ ಈಗಾಗಲೇ ವರದಿಯಾದಂತೆ ಇಟೆಲಿಯಲ್ಲಿ ಅಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
 

ಈ ವರದಿ ಪ್ರಕಾರ, ಈಗಾಗಲೇ ಅನುಷ್ಕಾ ಪರ ವಕೀಲರು ಮುಂಬೈನ ನೋಂದಣಿ ಕಚೇರಿಗೆ ಕೆಲವು ದಿನಗಳ ಹಿಂದೆ ಬಂದು ವಿವಾಹ ನೋಂದಣಿ ಅರ್ಜಿಯನ್ನು ಪಡೆದುಕೊಂಡಿದ್ದಾರಂತೆ. ಹೀಗಾಗಿ ಮೊದಲು ವಿವಾಹ ನೋಂದಣಿ ಮಾಡಿಸಿ ನಂತರ ಭಾರತದಲ್ಲೇ ಈ ಜೋಡಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಯಾವುದೂ ಇನ್ನೂ ಪಕ್ಕಾ ಆಗಿಲ್ಲ. ಕೊಹ್ಲಿ ಸದ್ಯಕ್ಕೆ ಟೀಂ ಇಂಡಿಯಾದಿಂದ ಬಿಡುವು ಪಡೆದಿದ್ದು, ಅನುಷ್ಕಾ ಜತೆ ಈ ರಜೆಯಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಅದ್ಭುತ ಬೌಲಿಂಗ್ ನಂತರ ಬ್ಯಾಟಿಂಗ್ ನಲ್ಲೂ ಮರೆಯುತ್ತಿರುವ ಕರ್ನಾಟಕ