ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟೆಲಿಯಲ್ಲಿ ಮುಂದಿನ ವಾರ ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಪುರಾವೆ ಸಿಕ್ಕಿದೆ.
ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಷ್ಕಾ, ಸಹೋದರ ಮತ್ತು ಹೆತ್ತವರ ಜತೆಗೆ ಇಟೆಲಿ ವಿಮಾನವೇರಿದ್ದಾರೆ. ಆದರೆ ಅನುಷ್ಕಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗಿದ್ದರೂ ಅವರ ವಕ್ತಾರರು ಇದು ಕೇವಲ ರಜಾ ದಿನ ಕಳೆಯಲು ಇಟೆಲಿಗೆ ಪ್ರವಾಸ ತೆರಳುತ್ತಿರುವುದಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗಿದ್ದರೂ ಭಾರೀ ಗಾತ್ರದ ಬ್ಯಾಗ್ ಗಳನ್ನು ಹಿಡಿದುಕೊಂಡು ಕುಟುಂಬ ಸಮೇತರಾಗಿ ಅನುಷ್ಕಾ ಇಟೆಲಿ ವಿಮಾನ ಏರಿದ್ದು ಕುತೂಹಲಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮುತ್ತಿಕೊಂಡರೂ ಅನುಷ್ಕಾ ಆಗಲೀ, ಕುಟುಂಬ ಸದಸ್ಯರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ