Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ-ಅನುಷ್ಕಾ ಮದುವೆ ಕಾರ್ಡ್ ಹಂಚಿಕೆ ಶುರುವಾಗಿದೆಯೇ?

ವಿರಾಟ್ ಕೊಹ್ಲಿ-ಅನುಷ್ಕಾ ಮದುವೆ ಕಾರ್ಡ್ ಹಂಚಿಕೆ ಶುರುವಾಗಿದೆಯೇ?
ನವದೆಹಲಿ , ಶನಿವಾರ, 9 ಡಿಸೆಂಬರ್ 2017 (07:59 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟೆಲಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇವರಿಬ್ಬರ ಮದುವೆಗೆ ಬರುವಂತೆ ಅನುಷ್ಕಾ ಪೋಷಕರು ಆಮಂತ್ರಣ ಪತ್ರಿಕೆ ಹಂಚುವ ಕೆಲಸವನ್ನೂ ಮಾಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
 

ಅನುಷ್ಕಾ ತಂದೆ ಅಜಯ್ ಕುಮಾರ್ ಶರ್ಮಾ ಈಗಾಗಲೇ ತಮ್ಮ ನೆರೆಹೊರೆಯವರಿಗೆ ಡಿಸೆಂಬರ್ 12 ರಂದು ಮದುವೆಗೆ ಬಂದು ಹರಸುವಂತೆ ಆಹ್ವಾನ ನೀಡಿದ್ದಾರೆ. ಆದರೆ ಮದುವೆ ವಿಷಯವನ್ನು ಆದಷ್ಟು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈಗಾಗಲೇ ಎರಡೂ ಕುಟುಂಬಗಳೂ ವಿದೇಶಕ್ಕೆ ಹಾರಿದ್ದು, ಮದುವೆ ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕ ಹುಟ್ಟಿಕೊಂಡಿದೆ. ಆದರೆ ಎರಡೂ ಕುಟುಂಬಗಳೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ಪ್ರಭಾಸ್ ಗೆ ಈ ಹುಡುಗಿ ಮೇಲೆ ಕ್ರಶ್ ಅಂತೆ!