Publish Date: Mon, 11 Dec 2017 (09:56 IST)
Updated Date: Mon, 11 Dec 2017 (09:58 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೇ ವಾರ ಇಟೆಲಿಯಲ್ಲಿ ವಿವಾಹವಾಗಲಿದ್ದಾರೆಂದು ಸುದ್ದಿ ಹಬ್ಬಿರುವ ಬೆನ್ನಲ್ಲೇ ಅವರಿಬ್ಬರ ಜೀವನ ಹೇಗಿರಬಹುದೆಂದು ಜ್ಯೋತಿಷಿಗಳು ಲೆಕ್ಕಾಚಾರ ಹಾಕಿದ್ದಾರೆ.
ಆರಂಭದ ಎರಡು ವರ್ಷಗಳು ಈ ಜೋಡಿ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಇಬ್ಬರ ಬ್ಯುಸಿ ವೃತ್ತಿ ವೇಳಾಪಟ್ಟಿಯೇ ಇದಕ್ಕೆ ಕಾರಣ. ಇದರಿಂದ ಇಬ್ಬರಲ್ಲೂ ಮನಸ್ತಾಪ ಕಂಡುಬರಬಹುದು ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಇಬ್ಬರ ಜಾತಕ ಪ್ರಕಾರ ಆರಂಭದ ಎರಡು ವರ್ಷಗಳು ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಜ್ಯೋತಿಷಿಗಳು ಎಚ್ಚರಿಕೆ ನೀಡಿದ್ದಾರೆ. ಅದೇನೇ ಇದ್ದರೂ ಇಂತಹ ಸುದ್ದಿಗಳಿಗೆಲ್ಲಾ ತಲೆಯೇ ಕೆಡಿಸಿಕೊಳ್ಳದೇ ವಿರುಷ್ಕಾ ಜೋಡಿ ಮದುವೆ ತಯಾರಿಯಲ್ಲಿ ಮುಳುಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ