Publish Date: Mon, 11 Dec 2017 (08:12 IST)
Updated Date: Mon, 11 Dec 2017 (08:17 IST)
ನವದೆಹಲಿ: ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನವಿತ್ತಿದ್ದನ್ನು ನೋಡಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಜತೆಗಿನ ಮದುವೆ ಪ್ಲಾನ್ ಕ್ಯಾನ್ಸಲ್ ಮಾಡಿ ಮರಳಿ ಭಾರತಕ್ಕೆ ಬಂದು ತಂಡ ಕೂಡಿಕೊಳ್ಳುತ್ತಾರಂತೆ!
ಹೀಗಂತ ನಾವು ಹೇಳುತ್ತಿಲ್ಲ. ಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ ನೋಡಿ ಟ್ವಿಟರಿಗರು ವಿಶಿಷ್ಟವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಕೆಲವು ಲೇವಡಿಗಳು ಇಲ್ಲಿವೆ ನೋಡಿ.
ಅನುಷ್ಕಾ ಶರ್ಮಾನೂ ಐ ಮಿಸ್ ಯೂ ಕೊಹ್ಲಿ ಎನ್ನುತ್ತಾರೆ. ಇತ್ತ ಟೀಂ ಇಂಡಿಯಾವೂ ಕೊಹ್ಲಿ ಮಿಸ್ ಯೂ ಎನ್ನುತ್ತಿದೆ. ಈ ರೀತಿ ಇಬ್ಬರೂ ನೀನೇ ಬೇಕು ಎಂದರೆ ಕೊಹ್ಲಿ ಎಲ್ಲಿಗೆ ಹೋಗಬೇಕೋ ಪಾಪ ಎಂದು ಕೆಲವರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಇನ್ನು ಕೆಲವರು, ಬ್ಯಾಂಕ್ ಖಾತೆ ಸುರಕ್ಷಿತವಾಗಿರಬೇಕಾದರೆ ಆಧಾರ್ ಲಿಂಕ್ ಮಾಡುವ ಹಾಗೆ ಟೀಂ ಇಂಡಿಯಾ ಸೇಫ್ ಆಗಿ ಇರಬೇಕಾದರೆ ಕೊಹ್ಲಿ ಲಿಂಕ್ ಆಗಿರಬೇಕು ಎಂದು ಕಾಲೆಳೆದಿದ್ದಾರೆ. ಅಂತೂ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿದ್ದಕ್ಕೆ ರೋಹಿತ್ ಶರ್ಮಾ ಮತ್ತು ಬಳಗ ಇನ್ನಿಲ್ಲದಂತೆ ಟ್ರೋಲ್ ಗೆ ಒಳಗಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ