Publish Date: Sun, 10 Dec 2017 (14:52 IST)
Updated Date: Sun, 10 Dec 2017 (14:54 IST)
ಧರ್ಮಶಾಲಾ: ಧರ್ಮಶಾಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನ ತೀರಾ ಹೀನಾಯವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 38.2 ಓವರ್ ಗಳಲ್ಲಿ ಕೇವಲ 112 ರನ್ ಗಳಿಗೆ ಆಲೌಟ್ ಆಗಿದೆ.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕಾಡಿದ್ದ ಸುರಂಗ ಲಕ್ಮಲ್ ಏಕದಿನ ಪಂದ್ಯದ ಮೊದಲ ಪಂದ್ಯದಲ್ಲೂ ಕಾಡಿದರು. ಶಿಖರ್ ಧವನ್, ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿದರೆ, ನಾಯಕ ರೋಹಿತ್ ಶರ್ಮಾ ಮತ್ತು ಮನೀಶ್ ಪಾಂಡೆ 2, ಶ್ರೇಯಸ್ ಅಯ್ಯರ್ 9, ಹಾರ್ದಿಕ್ ಪಾಂಡ್ಯ 10 ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಭಾರತೀಯ ಬ್ಯಾಟ್ಸ್ ಮನ್ ಗಳ ಪೆವಿಲಿಯನ್ ಪೆರೇಡ್ ಗೆ ಮೈದಾನದಲ್ಲಿದ್ದ ಅಭಿಮಾನಿಗಳು ದಂಗುಬಡಿದಿದ್ದರು. ಇನ್ನೊಂದೆಡೆ ಹಿರಿಯ ಧೋನಿ ಮಾತ್ರ ಏಕಾಂಗಿಯಾಗಿ ಹೋರಾಡಿದರಾದರೂ ಅವರಿಗೆ ಯಾರೂ ಸಾಥ್ ನೀಡುವವರಿಲ್ಲದೇ ಸೊರಗಿದರು. ಧೋನಿ 2 ಸಿಕ್ಸರ್ ಸಹಿತ 65 ರನ್ ಸಿಡಿಸಿದರು. ಲಕ್ಮಲ್ ಒಟ್ಟಾರೆ ವಿಕೆಟ್ ಕಿತ್ತರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ