ನಾಗ್ಪುರ: ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಮುಂಬೈ ಬ್ಯಾಟ್ಸ್ ಮನ್ ಗಳು ಕೊಂಚ ಪ್ರತಿರೋಧ ತೋರುತ್ತಿದ್ದಾರೆ.
 
ಮೂರನೇ ದಿನದಂತ್ಯಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡ ಮುಂಬೈ 120 ರನ್ ಮಾಡಿದೆ. ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆ ದಾಟಲು ಮುಂಬೈಗೆ ಇನ್ನೂ 277 ರನ್ ಗಳ ಅಗತ್ಯವಿದೆ.
									
			
			 
 			
 
 			
			                     
							
							
			        							
								
																	ಇದಕ್ಕೂ ಮೊದಲು ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 570 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ 397 ರನ್ ಗಳ ಮುನ್ನಡೆ ಪಡೆದಿತ್ತು. ನಾಳೆ ಒಂದು ದಿನ ಪಂದ್ಯ ಬಾಕಿಯಿದ್ದು, ಗೆಲುವಿಗೆ ಕರ್ನಾಟಕ ಮುಂಬೈಯನ್ನು ಬೇಗನೇ ಆಲೌಟ್ ಮಾಡಬೇಕಿದೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ