Publish Date: Fri, 08 Dec 2017 (16:54 IST)
Updated Date: Fri, 08 Dec 2017 (16:55 IST)
ನಾಗ್ಪುರ: ಮುಂಬೈ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ 222 ರನ್ ಗಳ ಬೃಹತ್ ಮುನ್ನಡೆ ಸಾಧಿಸಿತು.
ದ್ವಿತೀಯ ದಿನದಂತ್ಯಕ್ಕೆ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 395 ರನ್ ಗಳಿಸಿದೆ. ಸದ್ಯಕ್ಕೆ ಕ್ರೀಸ್ ನಲ್ಲಿ 80 ರನ್ ಗಳಿಸಿರುವ ಶ್ರೇಯಸ್ ಗೋಪಾಲ್ ಮತ್ತು 31 ರನ್ ಗಳಿಸಿರುವ ನಾಯಕ ವಿನಯ್ ಕುಮಾರ್ ಇದ್ದಾರೆ. ಇದಕ್ಕೂ ಮೊದಲು ಸಿ ಗೌತಮ್ 79 ರನ್ ಗಳಿಸಿ ಔಟಾಗಿದ್ದಾರೆ.
ಮುಂಬೈ ಪರ ಶಿವಂ ದುಬೆ 5 ವಿಕೆಟ್ ಕಬಳಿಸಿ ಗಮನ ಸೆಳೆದರು. ಒಟ್ಟಾರೆಯಾಗಿ ಎರಡನೇ ದಿನವೂ ಕರ್ನಾಟಕದ ಆಟಗಾರರು ಸಂಪೂರ್ಣ ಮೇಲುಗೈ ಸಾಧಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ