Publish Date: Sun, 10 Dec 2017 (08:46 IST)
Updated Date: Sun, 10 Dec 2017 (08:48 IST)
ಧರ್ಮಶಾಲ: ಇಲ್ಲಿನ ಸುಂದರ ತಾಣದಲ್ಲಿ ಇಂದಿನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿ ಆಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ.
ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಆದರೆ ಟೀಂ ಇಂಡಿಯಾಕ್ಕೆ ಏಕದಿನ ರ್ಯಾಂಕಿಂಗ್ ನಲ್ಲಿ ನಂ.1 ಆಗಲು ಇನ್ನೊಂದು ಅಂಕದ ಅಗತ್ಯವಿದ್ದು, ಈ ಸರಣಿ ಗೆದ್ದು ಆ ದಾಖಲೆ ಮಾಡುವ ಉತ್ಸಾಹದಲ್ಲಿದೆ.
ಕೊಹ್ಲಿ ಅನುಪಸ್ಥಿತಿ ಕಾಡದಂತೆ ಆಡುವ ಜವಾಬ್ದಾರಿ ಇತರ ಬ್ಯಾಟ್ಸ್ ಮನ್ ಗಳಿಗಿದೆ. ಆದರೆ ಪ್ರತಿಭಾವಂತ ಅಜಿಂಕ್ಯಾ ರೆಹಾನೆ ಫಾರ್ಮ್ ಕಳೆದುಕೊಂಡಿರುವುದು ಚಿಂತೆಯ ವಿಷಯ. ಉಳಿದಂತೆ ಬೌಲಿಂಗ್ ವಿಭಾಗ ಅದ್ಭುತ ಲಯದಲ್ಲಿದೆ.
ನಾಳೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಸರಣಿಯ ಉಳಿದ ಪಂದ್ಯಗಳು ಮೊಹಾಲಿ ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿದೆ.
ಪಂದ್ಯ ಆರಂಭ: ಬೆಳಿಗ್ಗೆ 11.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ