ನವದೆಹಲಿ: ಭಾರತೀಯ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಭಾರತೀಯ ವಾಯು ಸೇನೆಯ ಪರಾಕ್ರಮಕ್ಕೆ ಸೆಲ್ಯೂಟ್ ಮಾಡಿರುವ ಕ್ರಿಕೆಟಿಗ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ‘ಬಾಯ್ಸ್ ಚೆನ್ನಾಗಿ ಆಡಿದರು. ಇನ್ನಾದರೂ ಬದಲಾಗಿ, ಇಲ್ಲವಾದರೆ ನಾವೇ ಬದಲಾಯಿಸುತ್ತೇವೆ’ ಎಂದು ಸೆಹ್ವಾಗ್ ಖಡಕ್ ಟ್ವೀಟ್ ಮಾಡಿದ್ದಾರೆ.
ಅತ್ತ ಕ್ರಿಕೆಟಿಗ ಗಂಭೀರ್ ಕೂಡಾ ಇದೇ ರೀತಿಯ ಟ್ವೀಟ್ ಮಾಡಿದ್ದು, ವಾಯು ಸೇನೆಯ ಪರಾಕ್ರಮ, ಸಾಹಸಕ್ಕೆ ಸೆಲ್ಯೂಟ್ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.