Select Your Language

Notifications

webdunia
webdunia
webdunia
webdunia

ಭಾರತಕ್ಕೆ ಸರಿಯಾಗಿಯೇ ತಿರುಗೇಟು ಕೊಟ್ರಿ..! ಪಾಕ್ ಪ್ರಧಾನಿಗೆ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶಹಬ್ಬಾಶ್ ಗಿರಿ

ಇಮ್ರಾನ್ ಖಾನ್
ಇಸ್ಲಾಮಾಬಾದ್ , ಬುಧವಾರ, 20 ಫೆಬ್ರವರಿ 2019 (10:02 IST)
ಇಸ್ಲಾಮಾಬಾದ್: ಪುಲ್ವಾಮಾ ದಾಳಿ ವಿಚಾರದಲ್ಲಿ ಭಾರತ ತಮ್ಮ ಮೇಲೆ ಸಾಕ್ಷ್ಯವಿಲ್ಲದೇ ಆರೋಪ ಮಾಡುತ್ತಿದೆ. ನೀವೇನಾದ್ರೂ ದಾಳಿ ಮಾಡಿದ್ರೆ ನಾವೂ ಪ್ರತಿದಾಳಿ ಮಾಡುತ್ತೇವೆ ಎಂದಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.


ಪಾಕ್ ಪ್ರಧಾನಿ ಇಮ್ರಾನ್ ಖಾನ್ 10 ನಿಮಿಷಗಳ ವಿಡಿಯೋ ಸಂದೇಶದಲ್ಲಿ ಭಾರತ ಸಾಕ್ಷ್ಯ ಕೊಟ್ಟರೆ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಆದರೆ ಸಾಕ್ಷ್ಯವಿಲ್ಲದೇ ನಮ್ಮ ಮೇಲೆ ಆರೋಪ ಮಾಡಬಾರದು. ಒಂದು ವೇಳೆ ಇದೇ ನೆಪ ಮಾಡಿಕೊಂಡು ದಾಳಿ ಮಾಡಿದರೆ ನಾವೂ ಪ್ರತಿದಾಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಈ ವಿಡಿಯೋ ಸಂದೇಶವನ್ನು ಟ್ವೀಟ್ ಮಾಡಿರುವ ಶಾಹಿದ್ ಅಫ್ರಿದಿ ‘ಸರಿಯಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ರಿ’ ಎಂದು ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಪಾಕ್ ಜತೆಗೆ ಯುದ್ಧ ಮಾಡಬೇಕು ಎಂಬ ಹೇಳಿಕೆಗೆ ಅಫ್ರಿದಿ ‘ಅವನಿಗೆ ಏನಾಗಿದೆ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

‘ಪಾಕ್ ಸೊಸೆ’ ಸಾನಿಯಾ ಮಿರ್ಜಾರನ್ನು ರಾಯಭಾರಿ ಸ್ಥಾನದಿಂದ ಕಿತ್ತು ಹಾಕಿ!