Select Your Language

Notifications

webdunia
webdunia
webdunia
webdunia

ಕುಲದೀಪ್-ಚಾಹಲ್ ಜೋಡಿಗೆ ವೀರೇಂದ್ರ ಸೆಹ್ವಾಗ್ ಚಾಕು ತೋರಿಸಿದ್ದೇಕೆ?!

ವೀರೇಂದ್ರ ಸೆಹ್ವಾಗ್
ನವದೆಹಲಿ: ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಚಾಕು ತೋರಿಸಿದ್ದಾರೆ!
 

ಅಂದರೆ ಗಾಬರಿಯಾಗಬೇಡಿ! ಸೆಹ್ವಾಗ್ ಇವರಿಬ್ಬರನ್ನು ನೋಡಿ ಖುಷಿಯಾಗಿ ಚಾಹಲ್ ಹೆಸರಿನ ಚಾ ಮತ್ತು ಕುಲದೀಪ್ ಹೆಸರಿನ ಕು ತೆಗೆದು ಚಾಕು ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲ, ರಕ್ತ ಸಿಕ್ತ ಚಾಕು ಫೋಟೋ ಪ್ರಕಟಿಸಿ ಇಬ್ಬರೂ ಸೇರಿಕೊಂಡು ಆಫ್ರಿಕನ್ನರಿಗೆ ಚಾಕು ಹಾಕಿದರು ಎಂದು ತಮಾಷೆಯಾಗಿ ಅಭಿನಂದಿಸಿದ್ದಾರೆ.

ಸೆಹ್ವಾಗ್ ರ ಈ ಫನ್ನಿ ಟ್ವೀಟ್ ನೋಡಿ ಸ್ವತಃ ಯಜುವೇಂದ್ರ ಚಾಹಲ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಮ್ಮನ್ನು ಕುಲ್ ಚಾ ಎನ್ನುತ್ತೀರಾ? ಚಾಕು ಎನ್ನುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸೆಹ್ವಾಗ್ ಯಾವುದಾದರೂ ಸರಿಯೇ. ಇಬ್ಬರೂ ನಮ್ಮ ಹುಡುಗರೇ. ಚೆನ್ನಾಗಿ ಆಡಿದಿರಿ ಎಂದು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಸ್ತಿ ಸ್ವೀಕರಿಸುವಾಗ ಪತ್ನಿ ಅನುಷ್ಕಾರನ್ನು ನೆನೆಸಿಕೊಂಡ ವಿರಾಟ್ ಕೊಹ್ಲಿ!