Publish Date: Wed, 24 Jan 2018 (09:19 IST)
Updated Date: Wed, 24 Jan 2018 (09:20 IST)
ನವದೆಹಲಿ: ಯಾರ ಮಾತಿಗೂ ಕಿವಿಗೊಡದೆ ಮದವೇರಿದ ಆನೆಯಂತೆ ನಡೆಯುತ್ತಿರುವ ವಿರಾಟ್ ಕೊಹ್ಲಿಗೆ ಬುದ್ಧಿ ಹೇಳುವವರು ಬೇಕಾಗಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಖಡಕ್ ಆಗಿ ಹೇಳಿದ್ದಾರೆ.
ಪ್ರಸ್ತುತ ಟೀಂ ಇಂಡಿಯಾ ತಂಡದಲ್ಲಿ ಯಾವೊಬ್ಬ ಆಟಗಾರನೂ ಕೊಹ್ಲಿಗೆ ಎದುರು ನಿಂತು ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುವ ಧೈರ್ಯವಂತರು ಇಲ್ಲ. ಹಾಗಿರುವ ಒಬ್ಬ ಆಟಗಾರನ ಅಗತ್ಯ ತುರ್ತಾಗಿ ಇದೆ ಎಂದು ಸೆಹ್ವಾಗ್ ಖಾರವಾಗಿ ಹೇಳಿದ್ದಾರೆ.
ದ.ಆಫ್ರಿಕಾ ವಿರುದ್ಧ ಪಂದ್ಯಗಳಿಗೆ ತಂಡದ ಆಯ್ಕೆ ಬಗ್ಗೆ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದ ಸೆಹ್ವಾಗ್ ಇದೀಗ ಮತ್ತೊಮ್ಮೆ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಎಲ್ಲಾ ತಂಡದಲ್ಲೂ ನಾಯಕನಿಗೆ ಸರಿ ತಪ್ಪು ಹೇಳಲು ನಾಲ್ಕೈದು ಆಟಗಾರರಿರುತ್ತಾರೆ. ಆದರೆ ಹಾಲಿ ಭಾರತ ತಂಡದಲ್ಲಿ ಯಾರೂ ಅಂತಹವರಿಲ್ಲ. ಆತನ ಸಮಕ್ಕೆ ನಿಂತು ನಿರ್ಧಾರಗಳನ್ನು ಪ್ರಶ್ನಿಸುವ ಯಾವ ಆಟಗಾರನೂ ಇಲ್ಲ’ ಎಂದು ವೀರೂ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ