Publish Date: Tue, 23 Jan 2018 (10:12 IST)
Updated Date: Tue, 23 Jan 2018 (10:14 IST)
ಮುಂಬೈ: ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವುದು ಟೀಂ ಇಂಡಿಯಾ ಪಾಲಿಗೆ ಸತ್ಯವಾಗಿದೆ. ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಮೇಲೆ ವಿದೇಶಿ ಸರಣಿ ಆಡುವ ಮೊದಲು ಅಭ್ಯಾಸ ಪಂದ್ಯವಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಈ ನಿಟ್ಟಿನಲ್ಲಿ ಇನ್ನು ಮುಂದೆ ವಿದೇಶದಲ್ಲಿ ಸರಣಿ ಆರಂಭಕ್ಕೆ ಮೊದಲು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿ ಎಂದು ಕೋಚ್ ರವಿಶಾಸ್ತ್ರಿ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ತವರಿನಲ್ಲಿ ಪರಿಸ್ಥಿತಿ ನಮಗೆ ಚೆನ್ನಾಗಿ ಗೊತ್ತಿರುತ್ತದೆ. ಅಲ್ಲಿ ಅಭ್ಯಾಸ ಪಂದ್ಯದ ಅವಶ್ಯಕತೆಯಿಲ್ಲ. ಆದರೆ ವಿದೇಶದಲ್ಲಿ ಅಭ್ಯಾಸದ ಅಗತ್ಯವಿದೆ. ದ.ಆಫ್ರಿಕಾದಲ್ಲಿ ನಮಗೆ 10 ದಿನದ ಅಭ್ಯಾಸ ಸಿಕ್ಕಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು’ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಕೆಲವು ದಿನಗಳ ಮೊದಲು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಟೆಸ್ಟ್ ಆಟಗಾರರನ್ನು ಆಫ್ರಿಕಾ ಪಿಚ್ ಗೆ ಹೊಂದಿಕೊಳ್ಳಲು ಮೊದಲೇ ಕಳುಹಿಸುವ ಪ್ರಸ್ತಾಪವನ್ನು ಟೀಂ ಇಂಡಿಯಾ ತಿರಸ್ಕರಿಸಿತ್ತು ಎಂಬ ವರದಿ ಬಂದಿತ್ತು. ಇದೀಗ ಸ್ವತಃ ರವಿಶಾಸ್ತ್ರಿ ಅಭ್ಯಾಸಕ್ಕಾಗಿ ಮೊರೆಯಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ