Publish Date: Mon, 22 Jan 2018 (11:07 IST)
Updated Date: Mon, 22 Jan 2018 (11:10 IST)
ರಾಂಚಿ: ಟೆಸ್ಟ್ ಕ್ರಿಕೆಟ್ ಸರಣಿ ಮುಗಿದ ಮೇಲೆ ಟೀಂ ಇಂಡಿಯಾ ದ.ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲಿದೆ. ಈ ಸರಣಿ ಆಡಲು ಆಫ್ರಿಕಾ ವಿಮಾನವೇರುವ ಮುನ್ನ ಕ್ರಿಕೆಟಿಗ ಧೋನಿ ತಮ್ಮ ಲುಕ್ ಚೇಂಜ್ ಮಾಡಿಕೊಂಡಿದ್ದಾರೆ!
ಆಗಾಗ ಧೋನಿ ತಮ್ಮ ಹೇರ್ ಸ್ಟೈಲ್ ನಿಂದಲೇ ಸುದ್ದಿಯಾಗುತ್ತಿದ್ದರು. ಅವರು ಕ್ರಿಕೆಟ್ ಕಣಕ್ಕೆ ಬಂದ ಶುರುವಿನಲ್ಲಿ ಅವರ ಹೇರ್ ಸ್ಟೈಲ್ ಟ್ರೆಂಡ್ ಆಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಅವರು ಹೇರ್ ಸ್ಟೈಲ್ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ.
ಇದೀಗ ಮತ್ತೆ ಹೇರ್ ಸ್ಟೈಲ್ ಚೇಂಜ್ ಮಾಡಿಕೊಳ್ಳಲು ಸಲೂನ್ ಗೆ ಹೋಗಿದ್ದಾರೆ. ಸಲೂನ್ ನಲ್ಲಿ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ಧೋನಿ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ನಾವೂ ನಿಮ್ಮನ್ನು ಫಾಲೋ ಮಾಡುವುದಾಗಿ ಹೇಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ