Publish Date: Tue, 23 Jan 2018 (08:43 IST)
Updated Date: Tue, 23 Jan 2018 (08:48 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾಗೆ ಕಾಲಿಟ್ಟಾಗಿನಿಂದ ಟೀಂ ಇಂಡಿಯಾ ಅಲ್ಲಿ ಒದಗಿಸಿರುವ ಪ್ರಾಕ್ಟೀಸ್ ಪಿಚ್ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ಇದೀಗ ಮತ್ತೊಮ್ಮೆ ತೃತೀಯ ಟೆಸ್ಟ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವೇಗಿಗಳನ್ನು ಬಳಸಿ ಬ್ಯಾಟ್ಸ್ ಮನ್ ಗಳಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದರು. ಈ ವೇಳೆ ಪಿಚ್ ಬಗ್ಗೆ ಸಂಜಯ್ ಬಂಗಾರ್ ಮುಖ್ಯ ಕೋಚ್ ರವಿ ಶಾಸ್ತ್ರಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಕ್ಯುರೇಟರ್ ಬಳಿಗೆ ತೆರಳಿದ ರವಿಶಾಸ್ತ್ರಿ ರಿ ರೋಲ್ ಮಾಡುವಂತೆ ಸೂಚಿಸಿದರು. ಕ್ಯುರೇಟರ್ ಜತೆ ಚರ್ಚಿಸಿದ ರವಿಶಾಸ್ತ್ರಿ ಎಲ್ಲಾ ಪ್ರಾಕ್ಟೀಸ್ ಪಿಚ್ ಗಳನ್ನು ರಿ ರೋಲ್ ಮಾಡುವಂತೆ ಸೂಚಿಸಿದರು. ನಂತರ ನಾಯಕ ಕೊಹ್ಲಿ ಜತೆ ರವಿಶಾಸ್ತ್ರಿ ತೃತೀಯ ಟೆಸ್ಟ್ ಪಂದ್ಯ ನಡೆಯುವ ಮುಖ್ಯ ಪಿಚ್ ನ್ನೂ ಪರಿಶೀಲಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ