Publish Date: Wed, 22 Apr 2020 (09:55 IST)
Updated Date: Wed, 22 Apr 2020 (09:57 IST)
ಮುಂಬೈ: ವಿರಾಟ್ ಕೊಹ್ಲಿ ಇಂದು ರನ್ ಮೆಷಿನ್ ಎಂದು ವಿಖ್ಯಾತರಾಗಿರಬಹುದು. ಆದರೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಕೊಹ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.
ಹಿಂದೊಮ್ಮೆ ರಾಜ್ಯ ತಂಡಕ್ಕೆ ಆಯ್ಕೆಯಾಗದೇ ಇದ್ದಾಗ ನಿರಾಸೆಯಿಂದ ಕೊಹ್ಲಿ ರಾತ್ರಿಯಿಡೀ ಅತ್ತಿದ್ದರಂತೆ. ಬೆಳಗಿನ ಜಾವ ಮೂರು ಗಂಟೆಯವರೆಗೂ ರೋಧಿಸುತ್ತಲೇ ಇದ್ದರಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.
ನಾನು ಆಗ ಚೆನ್ನಾಗಿಯೇ ಆಡುತ್ತಿದ್ದೆ. ಆದರೆ ತಂಡಕ್ಕೆ ಆಯ್ಕೆಯಾಗದೇ ಇದ್ದಾಗ ತೀವ್ರ ಬೇಸರವಾಗಿತ್ತು. ರಾತ್ರಿ ಎರಡು ಗಂಟೆಯವರೆಗೂ ನನ್ನ ಕೋಚ್ ಬಳಿ ನಾನು ಯಾಕೆ ಆಯ್ಕೆಯಾಗಲಿಲ್ಲವೆಂದು ಅತ್ತು ಕರೆದು ಮಾಡಿ ಪ್ರಶ್ನಿಸಿದ್ದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.