Publish Date: Tue, 21 Apr 2020 (09:49 IST)
Updated Date: Tue, 21 Apr 2020 (09:51 IST)
ನವದೆಹಲಿ: ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೆ ಸಾಮಾನ್ಯವಾಗಿ ಕ್ರಿಕೆಟಿಗರು ಕಾಮೆಂಟೇಟರ್ ಆಗುತ್ತಾರೆ. ಆದರೆ ಯುವರಾಜ್ ಸಿಂಗ್ ಮಾತ್ರ ಕಾಮೆಂಟೇಟರ್ ಆಗಲ್ವಂತೆ.
ಅವಕಾಶ ಸಿಕ್ಕರೆ ಕೋಚ್ ಆಗಿ ಕೆಲಸ ಮಾಡುವೆ. ಆದರೆ ಅಪ್ಪಿ ತಪ್ಪಿಯೂ ಕಾಮೆಂಟರಿ ಬಾಕ್ಸ್ ನಲ್ಲಿ ಕೂರಲ್ಲ ಎಂದು ಯುವರಾಜ್ ಹೇಳಿದ್ದಾರೆ.
ಕಾಮೆಂಟರಿ ಬಾಕ್ಸ್ ನೊಳಗೆ ಕೂರುವುದು ಎಂದರೆ ಅವರಿಗೆ ಆಗಿ ಬರಲ್ವಂತೆ. ಕೋಚ್ ಆದರೆ ಜನರೊಂದಿಗೆ ಬೆರೆಯಬಹುದು. ಆದರೆ ಕಾಮೆಂಟರಿ ಎಂದರೆ ಹಾಗಲ್ಲ. ನನಗೆ ಅಷ್ಟು ಹೊತ್ತು ಬಾಕ್ಸ್ ನೊಳಗೆ ಕೂತು ಮಾತನಾಡುತ್ತಾ ಕೂರುವ ತಾಳ್ಮೆಯಿಲ್ಲ ಎಂದು ಯುವಿ ಹೇಳಿಕೊಂಡಿದ್ದಾರೆ.