Publish Date: Mon, 20 Apr 2020 (09:31 IST)
Updated Date: Mon, 20 Apr 2020 (09:32 IST)
ಮುಂಬೈ: 2002 ರ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯ ಕ್ರಿಕೆಟ್ ಪ್ರಿಯರಿಗೆ ಎಲ್ಲರಿಗೂ ನೆನಪಿರುತ್ತದೆ. ಅಂದು ಗಂಗೂಲಿ ಶರ್ಟ್ ಬಿಚ್ಚಿ ಲಾರ್ಡ್ಸ್ ಅಂಗಣದ ಬಾಲ್ಕನಿಯಲ್ಲಿ ಕುಣಿದಾಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಆವತ್ತು ಗಂಗೂಲಿ ಜತೆಗೆ ಯುವರಾಜ್ ಸಿಂಗ್ ಕೂಡಾ ಶರ್ಟ್ ಬಿಚ್ಚಿದ್ದರಂತೆ. ಆದರೆ ಯಾರೂ ನೋಡಿರಲಿಲ್ಲ ಎಂದು ಯುವಿ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ನಲ್ಲಿ ಚಳಿ ಜಾಸ್ತಿ ಅಲ್ವಾ? ಅದಕ್ಕೆ ಎರಡು ಟಿ ಶರ್ಟ್ ಹಾಕಿದ್ದೆ. ಆವತ್ತು ನಾನು ಒಂದು ಶರ್ಟ್ ನ್ನು ಬಿಚ್ಚಿದ್ದೆ. ಆದರೆ ಯಾರೂ ಗಮನಿಸಿರಲಿಲ್ಲ ಅಷ್ಟೇ. ಹಾಗಾಗಿ ಬಚಾವ್ ಆದೆ’ ಎಂದು ಯುವಿ ಹೇಳಿಕೊಂಡಿದ್ದಾರೆ.