Publish Date: Thu, 16 Apr 2020 (10:20 IST)
Updated Date: Thu, 16 Apr 2020 (10:22 IST)
ಮುಂಬೈ: ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ನಡುವೆ ಸ್ನೇಹಕಕ್ಊ ಮೀರಿದ ಸಂಬಂಧವಿದೆ ಎಂದು ಗಾಸಿಪ್ ಗಳು ಹರಿದಾಡುತ್ತಲೇ ಇವೆ. ಅದಕ್ಕೆ ಪುಷ್ಠಿ ನೀಡುವಂತೆ ಇಬ್ಬರೂ ಆಗಾಗ ಜತೆಯಾಗಿ ಕಾಣಿಸಿಕೊಳ್ಳುತ್ತಾರೆ.
ಇದೀಗ ಅಥಿಯಾ ಶೆಟ್ಟಿ ಶರ್ಟ್ ಒಂದನ್ನು ಹಾಕಿಕೊಂಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಅದನ್ನು ನೋಡಿ ಅಭಿಮಾನಿಗಳು ಇದು ಕೆಎಲ್ ರಾಹುಲ್ ಶರ್ಟ್ ಇರಬೇಕು ಎಂದು ಕಾಲೆಳೆದಿದ್ದಾರೆ.
ಶರ್ಟ್ ನೋಡಿದರೆ ಕೆಎಲ್ ರದ್ದು ಎನಿಸುತ್ತದೆ. ಅವರಿಗೆ ಟೀಂ ಇಂಡಿಯಾ ಜೆರ್ಸಿ ಕೊಡಿ, ಅದು ಚೆನ್ನಾಗಿ ಒಪ್ಪುತ್ತದೆ ಎಂದು ಹಲವರು ತಮಾಷೆ ಮಾಡಿದ್ದಾರೆ.