Publish Date: Wed, 08 Apr 2020 (10:34 IST)
Updated Date: Wed, 08 Apr 2020 (10:36 IST)
ಮುಂಬೈ: ಕೆಎಲ್ ರಾಹುಲ್-ಹಾರ್ದಿಕ್ ಪಾಂಡ್ಯ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿದ್ದ ಘಟನೆ ಬಗ್ಗೆ ಯುವರಾಜ್ ಸಿಂಗ್ ಮಾತನಾಡಿದ್ದಾರೆ.
ನಮ್ಮ ಕಾಲದಲ್ಲಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದ ಯುವರಾಜ್ ಸಿಂಗ್, ಇದಕ್ಕೆ ಕಾರಣವೇನೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಕಾಲದಲ್ಲಾಗಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಯಾಕೆಂದರೆ ಆಗ ಸಾಮಾಜಿಕ ಜಾಲತಾಣದ ಪ್ರಭಾವ ಅಷ್ಟಿರಲಿಲ್ಲ. ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ, ಪಾರ್ಟಿಗಳಿಂದಾಗಿ ಇಂದಿನ ಯುವ ಆಟಗಾರರು ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.