Select Your Language

Notifications

webdunia
webdunia
webdunia
webdunia

ತನ್ನ ಸೀಟ್ ನಲ್ಲಿ ಕೂತಿದ್ದ ರೋಹಿತ್ ಶರ್ಮಾ ನೋಡಿ ಸಿಟ್ಟಾಗಿದ್ದ ಯುವರಾಜ್ ಸಿಂಗ್

ತನ್ನ ಸೀಟ್ ನಲ್ಲಿ ಕೂತಿದ್ದ ರೋಹಿತ್ ಶರ್ಮಾ ನೋಡಿ ಸಿಟ್ಟಾಗಿದ್ದ ಯುವರಾಜ್ ಸಿಂಗ್
ಮುಂಬೈ , ಬುಧವಾರ, 8 ಏಪ್ರಿಲ್ 2020 (10:07 IST)
ಮುಂಬೈ: ಯುವರಾಜ್ ಸಿಂಗ್ ಜತೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಬಂದ ರೋಹಿತ್ ಶರ್ಮಾ ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.


ಲಾಕ್ ಡೌನ್ ವೇಳೆ ತಮ್ಮ ಗೆಳೆಯರೊಂದಿಗೆ ಇನ್ ಸ್ಟಾಗ್ರಾಂ ಲೈವ್ ಬರುತ್ತಿರುವ ರೋಹಿತ್ ನಿನ್ನೆ ಯುವಿ ಜತೆ ಲೈವ್ ಬಂದಿದ್ದರು. ನಿನ್ನೆ ಮಾತುಕತೆ ವೇಳೆ ರೋಹಿತ್ ಶರ್ಮಾ ತಾವು ಯುವರಾಜ್ ರನ್ನು ರೋಲ್ ಮಾಡೆಲ್ ಆಗಿ ಕಾಣುತ್ತಿದ್ದುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಹಿಂದೊಮ್ಮೆ ಬೇಕೆಂದೇ ಟೀಂ ಬಸ್ ನಲ್ಲಿ ಯುವರಾಜ್ ಸೀಟ್ ನಲ್ಲಿ ಕೂತು ಅವರಿಗೆ ಸಿಟ್ಟು ತರಿಸಿದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಅದೇನೇ ಇದ್ದರೂ ಇಬ್ಬರೂ ಈಗ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದು, ಉತ್ತಮ ಗೆಳೆಯರಾಗಿದ್ದಾರೆ.

ಹಿಂದೊಮ್ಮೆ ಮೊದಲೇ ಟೀಂ ಬಸ್ ಏರಿ ಬೇಕೆಂದೇ ಯುವರಾಜ್ ಸಿಂಗ್ ಸೀಟ್ ನಲ್ಲಿ ಕೂತಿದ್ದೆ. ನನಗೆ ಆರ್ ಪಿ ಸಿಂಗ್ ಇದು ಯುವರಾಜ್ ಸೀಟ್ ಎಂದು ಹೇಳಿದ್ದರೂ ಅವರ ಸೀಟ್ ನಲ್ಲೇ ಕೂತಿದ್ದೆ. ತಡವಾಗಿ ಬಸ್ ಒಳಗೆ ಬಂದ ಯುವರಾಜ್ ನನ್ನ ನೋಡಿ ಸಿಟ್ಟಿಗೆದ್ದರು. ಇದು ಯಾರ ಸೀಟ್ ಎಂದು ಗೊತ್ತಾ? ಎಂದು ಕೇಳಿದರು. ನಂತರ ಏಳು ಇದು ನನ್ನ ಸೀಟ್. ನೀನು ಬೇರೆ ಸೀಟ್ ನೋಡ್ಕೋ’ ಎಂದು ಎಬ್ಬಿಸಿದರು. ಹಾಗಿದ್ದರೂ ನಾವಿಬ್ಬರೂ ಈಗಲೂ ಉತ್ತಮ ಗೆಳೆಯರು ಎಂದು ರೋಹಿತ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಗೆ ದೇಣಿಗೆ ನೀಡಲು ಗೆದ್ದ ಟ್ರೋಫಿಗಳನ್ನು ಮಾರಿದ ಕ್ರೀಡಾಪಟು