Publish Date: Sat, 04 Apr 2020 (11:03 IST)
Updated Date: Sat, 04 Apr 2020 (11:06 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ತಾವು ಇದುವರೆಗೆ ನೋಡಿದ ಬೆಸ್ಟ್ ಕೋಚ್ ಯಾರು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ ಮಾಜಿ ನಾಯಕ, ಮುಂಬೈ ಇಂಡಿಯನ್ಸ್ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಹೆಸರು ಹೇಳಿದ್ದಾರೆ.
ಹಲವು ಕೋಚ್ ಗಳ ಬಳಿ ಕೆಲಸ ಮಾಡಿದ್ದರೂ ರೋಹಿತ್ ತಮಗೆ ಯಾಕೆ ರಿಕಿ ಪಾಂಟಿಂಗ್ ಬೆಸ್ಟ್ ಎನಿಸುತ್ತಾರೆ ಎಂದು ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
‘ರಿಕಿ ಪಾಂಟಿಂಗ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದರು. ಅರ್ಧದಲ್ಲಿ ಅವರು ನಾಯಕತ್ವವನ್ನು ನನಗೆ ಬಿಟ್ಟುಕೊಟ್ಟರು. ಹಾಗೆ ಮಾಡಲು ಧೈರ್ಯ ಬೇಕು. ಆ ಬಳಿಕ ಕೋಚ್ ಆಗಿ ಅವರು ನಮ್ಮನ್ನು ನಡೆಸಿಕೊಳ್ಳುತ್ತಿದ್ದ ರೀತಿ ನಿಜಕ್ಕೂ ಅದ್ಭುತ. ಅವರಿಂದ ಸಾಕಷ್ಟು ಕಲಿತೆ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.