Select Your Language

Notifications

webdunia
webdunia
webdunia
webdunia

ಆರ್ ಸಿಬಿಗೆ ಧನ್ಯವಾದ ಸಲ್ಲಿಸಿದ ಗೌತಮ್ ಗಂಭೀರ್

ಗೌತಮ್ ಗಂಭೀರ್
ನವದಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬದ್ಧ ಎದುರಾಳಿಯೆಂದೇ ಪರಿಗಣಿಸುತ್ತಿದ್ದ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಈಗ ಆರ್ ಸಿಬಿಗೆ ಧನ್ಯವಾದ ಸಲ್ಲಿಸಿದ್ದಾರೆ.


ಗಂಭೀರ್ ಕೊರೋನಾ ಪರಿಹಾರ ಕೆಲಸಕ್ಕೆ ಪ್ರಧಾನಿ ಪರಿಹಾರ ನಿಧಿಗೆ ಎರಡು ವರ್ಷದ ವೇತನ 1 ಕೋಟಿ ರೂ. ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಆರ್ ಸಿಬಿ ತನ್ನ ಟ್ವಿಟರ್ ನಲ್ಲಿ ಗಂಭೀರ್ ಗೆ ಅಭಿನಂದಿಸಿ ಟ್ವೀಟ್ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗಂಭೀರ್ ‘ನಿಮ್ಮ ವಿರುದ್ಧ ಆಡುವಾಗಲೆಲ್ಲಾ ಸೋಲಲು ನಾನು ಇಷ್ಟಪಡುತ್ತಿರಲಿಲ್ಲ. ಆದರೆ ಈವತ್ತು ನೀವು ನನ್ನನ್ನೇ ಗೆದ್ದು ಬಿಟ್ಟಿರಿ’ ಎಂದು ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದಾಗಿ ಮದುವೆ ಮುಂದೂಡಿರುವ ಕ್ರಿಕೆಟಿಗರು!