Select Your Language

Notifications

webdunia
webdunia
webdunia
webdunia

ಉಸಿರಿನಿಂದಲೂ, ಮಾತಾಡುವುದರಿಂದಲೂ ಕೊರೋನಾ ಹರಡುತ್ತದಂತೆ!

ಉಸಿರಿನಿಂದಲೂ, ಮಾತಾಡುವುದರಿಂದಲೂ ಕೊರೋನಾ ಹರಡುತ್ತದಂತೆ!
ನವದೆಹಲಿ , ಶನಿವಾರ, 4 ಏಪ್ರಿಲ್ 2020 (10:14 IST)
ನವದೆಹಲಿ: ಕೊರೋನಾವೈರಸ್ ಇಷ್ಟು ದಿನ ಸೋಂಕಿತರ ಸ್ಪರ್ಶದಿಂದ, ಅವರ ಜೊಲ್ಲು, ಸೀನು ತಾಕಿದರೆ ಮಾತ್ರ ಹರಡುತ್ತದೆ ಎಂಬ ನಂಬಿಕೆಯಿತ್ತು. ಆದರೆ ವಿಜ್ಞಾನಿಗಳ ಪ್ರಕಾರ ಸೋಂಕಿತರ ಜತೆ ಮಾತನಾಡುವುದರಿಂದಲೂ, ಉಸಿರು ಸೋಕುವುದರಿಂದಲೂ ಹರಡುತ್ತದೆ ಎನ್ನಲಾಗಿದೆ.

 
ಇದುವರೆಗೆ ಗಾಳಿ ಮೂಲಕ ರೋಗ ಹರಡುವುದಿಲ್ಲ ಎಂದು ನೆಮ್ಮದಿಯಾಗಿದ್ದವರಿಗೆ ಅಮೆರಿಕಾ ವಿಜ್ಞಾನಿಗಳು ಇಂತಹದ್ದೊಂದು ಶಾಕ್ ನೀಡಿದ್ದಾರೆ. ಇದರಿಂದಾಗಿಯೇ ವೈರಸ್ ಇಷ್ಟು ವೇಗವಾಗಿ ಹರಡುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದರಿಂದಾಗಿ ಸಂಪೂರ್ಣ ಲಾಕ್ ಡೌನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಏಕಾಂತವಾಗಿರುವುದು ಈ ರೋಗದಿಂದ ರಕ್ಷಣೆ ಪಡೆಯಲು ಸೂಕ್ತವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಗಾಪುರ್ ನಲ್ಲಿ ಮತ್ತೆ ಒಂದು ತಿಂಗಳು ಲಾಕ್ ಡೌನ್: ನಮಗೂ ಇದೇ ಗತಿಯೇ?