Publish Date: Thu, 16 Apr 2020 (09:42 IST)
Updated Date: Thu, 16 Apr 2020 (09:43 IST)
ಮುಂಬೈ: ಕೊರೋನಾ ಹರಡುವಿಕೆ ತಡೆಯಲು ಸರ್ಕಾರ ಲಾಕ್ ಡೌನ್ ವಿಧಿಸಿರುವುದನ್ನು ಗಂಭೀರವಾಗಿ ಪರಿಗಣಿಸದ ಜನರ ಮೇಲೆ ನಟ ಸಲ್ಮಾನ್ ಖಾನ್ ಕಿಡಿ ಕಾರಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿರುವ ಸಲ್ಮಾನ್ ಬಿಗ್ ಬಾಸ್ ಶೋ ಶೈಲಿಯಲ್ಲಿ ಮಾತನಾಡಿದ್ದಾರೆ. ನಿಮ್ಮ ಜತೆಗೆ ನಿಮ್ಮ ಕುಟುಂಬದವರನ್ನೂ ಯಾಕೆ ಅಪಾಯಕ್ಕೆ ತಳ್ಳುತ್ತೀರಿ ಎಂದು ಸಲ್ಮಾನ್ ಆಕ್ರೋಶದಿಂದಲೇ ಪ್ರಶ್ನಿಸಿದ್ದಾರೆ.
ಲಾಕ್ ಡೌನ್ ನಿಯಮಗಳನ್ನು ಮುರಿಯುವುದು, ಮಾಸ್ಕ್ ಹಾಕದೇ ತಿರುಗಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಪೊಲೀಸರು ವಿನಾಕಾರಣ ಎದುರಿಗೆ ಸಿಕ್ಕವರ ಮೇಲೆ ಲಾಠಿ ಪ್ರಹಾರ ನಡೆಸುತ್ತಾರೆ ಎನ್ನುತ್ತಿದ್ದಾರೆ. ಆದರೆ ಕಾರಣವಿಲ್ಲದೇ ಅವರೂ ಲಾಠಿ ಎತ್ತಲ್ಲ. ನಿಯಮಗಳನ್ನು ಪಾಲಿಸಿ ಎಂದು ಸಲ್ಮಾನ್ ಮನವಿ ಮಾಡಿದ್ದಾರೆ.