Select Your Language

Notifications

webdunia
webdunia
webdunia
webdunia

ಅಭಿಮಾನಿಗಳು ಮಾಡಿದ ಒಂದು ಕೆಲಸದಿಂದ ಖುಷಿಯಾದ ಕಿಚ್ಚ ಸುದೀಪ್

ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 16 ಏಪ್ರಿಲ್ 2020 (09:23 IST)
ಬೆಂಗಳೂರು: ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೆಚ್ಚಿನ ಸ್ಟಾರ್ ಗಳ ಟಿಕ್ ಟಾಕ್, ವಿಡಿಯೋ ಎಡಿಟ್ ಮಾಡಿ ಹಾಕುವುದು ಸಾಮಾನ್ಯ. ಆದರೆ ಇಂತಹದ್ದೇ ಒಂದು ವಿಡಿಯೋ ಕಿಚ್ಚ ಸುದೀಪ್ ಗೆ ಭಾರೀ ಖುಷಿಯಾಗಿದೆ.


ಟ್ವಿಟರ್ ನಲ್ಲಿ ಅಭಿಮಾನಿ ಬಳಗವೊಂದು ಕಿಚ್ಚ ಸುದೀಪ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ವೇದಿಕೆಯೊಂದರಲ್ಲಿ ‘ತುತ್ತು ಅನ್ನ ತಿನ್ನೋಕೆ’ ಹಾಡನ್ನು ಹಾಡುವುದನ್ನು ಎಡಿಟ್ ಮಾಡಿ ವಿಡಿಯೋ ಮಾಡಿ ಕಳುಹಿಸಿದ್ದರು.

ಅಪ್ಪಟ ವಿಷ್ಣು ಅಭಿಮಾನಿಯಾಗಿರುವ ಕಿಚ್ಚ ಈ ವಿಡಿಯೋ ನೋಡಿ ಥ್ರಿಲ್ ಆಗಿದ್ದಾರೆ. ಇದೊಂದು ಸಿಂಪಲ್ ಎಡಿಟ್ ಆಗಿರಬಹುದು. ಆದರೆ ಇದು ನನಗೆ ಕೊಟ್ಟಿರುವ ಖುಷಿ ಹೇಳಲು ಸಾಧ‍್ಯವಿಲ್ಲ ಎಂದು ಕಿಚ್ಚ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಮುಗಿದ ಮೇಲೆ ಧಾರವಾಹಿ ಶೂಟಿಂಗ್ ಆರಂಭ