Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ಆತಿಥ್ಯ ಅದಲು ಬದಲು ಮಾಡಲಿ ಎಂದ ಸುನಿಲ್ ಗವಾಸ್ಕರ್

ಟಿ20 ವಿಶ್ವಕಪ್ ಭಾರತ-ಆಸ್ಟ್ರೇಲಿಯಾ ಆತಿಥ್ಯ ಅದಲು ಬದಲು ಮಾಡಲಿ ಎಂದ ಸುನಿಲ್ ಗವಾಸ್ಕರ್
ದುಬೈ , ಬುಧವಾರ, 22 ಏಪ್ರಿಲ್ 2020 (09:19 IST)
ದುಬೈ: ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದ ಆತಿಥ್ಯ ವಿಚಾರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅದಲು ಬದಲು ಆತಿಥ್ಯ ಮಾಡಿಕೊಳ್ಳಲಿ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.


ಈ ವರ್ಷ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದೆ. ಆದರೆ ಆಸ್ಟ್ರೇಲಿಯಾಕ್ಕೆ ಆರು ತಿಂಗಳ ಮಟ್ಟಿಗೆ ವಿದೇಶಿಯರ ಪ್ರವಾಸಕ್ಕೆ ನಿರ್ಬಂಧ ವಿಧಿಸಿದೆ. ಹೀಗಾಗಿ ಅಲ್ಲಿ ಟಿ20 ವಿಶ್ವಕಪ್ ನಡೆಯುವುದು ಅನುಮಾನವಾಗಿದೆ.

ಈ ಸಮಯದಲ್ಲಿ ಭಾರತದಲ್ಲಿ ಕೊರೋನಾ ಸುಧಾರಿಸಿದ್ದರೆ ಈ ಬಾರಿ ಭಾರತದಲ್ಲಿ ಟಿ20 ವಿಶ್ವಕಪ್ ನಡೆಸಿ ಮುಂದಿನ ಬಾರಿ ಭಾರತದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ನ್ನು ಆಸ್ಟ್ರೇಲಿಯಾದಲ್ಲಿ ನಡೆಸಲಿ ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೊಂದು ವರ್ಷ ಕ್ರಿಕೆಟ್ ನೋಡೋಕ್ಕಾಗಲ್ಲ!