ಭಾರತ ಮಹಿಳಾ ತಂಡವನ್ನು ಫೈನಲ್ ತಲುಪಿಸಿದ್ದು ಅಮಿತ್ ಶಾ ಪುತ್ರನಾ?! ಗಂಗೂಲಿಗೆ ಟ್ವಿಟರಿಗರ ಟಾಂಗ್

ಸೋಮವಾರ, 9 ಮಾರ್ಚ್ 2020 (10:42 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಮಹಿಳಾ ಟಿ20 ವಿಶ್ವಕಪ್ ನ ಫೈನಲ್ ನಲ್ಲಿ ಸೋತರೂ ಫೈನಲ್ ವರೆಗೆ ತಲುಪಿದ ಸಾಧನೆ ಮಾಡಿದ್ದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಡಿದ ಟ್ವೀಟ್ ಒಂದು ಈಗ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ.


ಮಹಿಳಾ ತಂಡಕ್ಕೆ ಶುಭ ಕೋರುವಾಗ ಗಂಗೂಲಿ ಬಿಸಿಸಿಐ ಟ್ವಿಟರ್ ಖಾತೆ ಜತೆಗೆ ಕಾರ್ಯದರ್ಶಿ ಜಯ್ ಶಾ (ಅಮಿತ್ ಶಾ ಪುತ್ರ) ಹೆಸರನ್ನೂ ಟ್ಯಾಗ್ ಮಾಡಿದ್ದರು. ಆದರೆ ಬಿಸಿಸಿಐ ಮಹಿಳಾ ತಂಡದ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿರಲಿಲ್ಲ. ಈ ಕಾರಣಕ್ಕೆ ಗಂಗೂಲಿಯ ಕಾಲೆಳೆದಿರುವ ಟ್ವಿಟರಿಗರು ಮಹಿಳಾ ತಂಡಕ್ಕೆ ಕೋಚ್ ಆಗಿದ್ದವರು ಜಯ್ ಶಾ ಅವರಾ ಎಂದು ಲೇವಡಿ ಮಾಡಿದ್ದಾರೆ.

ದಾದ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಕೊನೆಗೂ ನೀವು ಜಯ್ ಶಾ ಅವರ ಕೈಗೊಂಬೆ ಎಂದು ಸಾಬೀತುಪಡಿಸಿದಿರಿ ಎಂದು ಕೆಲವರು ಆಕ್ಷೇಪಿದರೆ ಮತ್ತೆ ಕೆಲವರು ಜಯ್ ಶಾ ಏನು ಮಹಿಳಾ ತಂಡದ ಕೋಚಾ? ಅವರನ್ನು ಏಕೆ ಟ್ಯಾಗ್ ಮಾಡಿದಿರಿ? ಮಹಿಳಾ ತಂಡವನ್ನು ಯಾಕೆ ಟ್ಯಾಗ್ ಮಾಡಿಲ್ಲ? ಮಹಿಳೆಯರು ಫೈನಲ್ ತಲುಪಿದರೆ ಜಯ್ ಶಾಗೆ ಅಭಿನಂದನೆ ಯಾಕೆ ಎಂದು ಗಂಗೂಲಿಗೆ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ದಿಲ್ಶಾನ್ ಬೌಲಿಂಗ್ ನಿಂದ ಸೋತ ಆಸ್ಟ್ರೇಲಿಯಾ ದಿಗ್ಗಜರು